ನ್ಯೂಸ್ ನಾಟೌಟ್ : ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತ ಹಿರಿಯರು ಹೇಳುತ್ತಾರೆ.ಅದೊಂದು ಅಮೂಲ್ಯ ಘಳಿಗೆ.ಇತ್ತೀಚಿನ ದಿನಗಳಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ಮದುವೆ ಸಮಾರಂಭವನ್ನು ಸಂಭ್ರಮದಿಂದ ಮಾಡುತ್ತಾರೆ.ಇಷ್ಟೆಲ್ಲಾ ಖರ್ಚು ಮಾಡಿದ್ದೀವಿ, ಮಳೆ ಬಾರದಿದ್ದರೆ ಸಾಕಪ್ಪಾ ಎಂದು ಕೆಲವರು ಬಯಸುವವರು ಇರುತ್ತಾರೆ.ಆದರೆ ಇಲ್ಲೊಂದು ಕಡೆ ಜೋರಾಗಿ ಮಳೆ ಬಂದರೂ ಮಳೆಯಲ್ಲಿ ನೆನೆದುಕೊಂಡೆ ಮದುವೆಯಾದ ಅಪರೂಪದ ಜೋಡಿ ಇದು..ಇದೀಗ ವಿಡಿಯೋ ಬಾರಿ ವೈರಲ್ ಆಗುತ್ತಿದೆ.
ವಿಡಿಯೋ ನೋಡಿದರೆ ನಿಮಗೆ ಆಶ್ಚರ್ಯವಾಗುತ್ತದೆ.ಮದುವೆ ಕಾರ್ಯಕ್ರಮಕ್ಕೆ ಅಷ್ಟೊಂದು ಜನ ಸೇರಿದವರೆಲ್ಲರೂ ಮಳೆ ಬಂದರೂ ಯಾವುದೇ ತಲೆಬಿಸಿ ಮಾಡದೇ ಶಾಂತಚಿತ್ತರಾಗಿ ನಿಭಾಯಿಸಿದ್ದಾರೆ.ಅದ್ದೂರಿ ಮದುವೆ ಕಾರ್ಯಕ್ರಮದಲ್ಲಿ ಡಾನ್ಸರ್ ಗಳು ಕೂಡ ಮಳೆಯನ್ನು ಲೆಕ್ಕಿಸದೇ ಡಾನ್ಸ್ ಮಾಡುತ್ತಿರುವುದನ್ನು ನೀವು ಗಮನಿಸಬಹುದು.
ಅಂದ ಹಾಗೆ ಇದು ಗ್ರ್ಯಾಂಡ್ ಮದುವೆಯೇ. ಆ ಮದುವೆಗಾಗಿಯೇ ಲಕ್ಷಗಟ್ಟಲೇ ಖರ್ಚು ಮಾಡಿ ದೊಡ್ಡ ಸೆಟ್ ಗಳನ್ನು ಹಾಕಲಾಗಿದೆ. ಆದರೆ ಇಂಥ ಶುಭ ಕಾರ್ಯದಲ್ಲಿ ಮಳೆ ಬಂದಿದೆ. ಮಳೆ ಬಂದಿದೆಯೇನೋ ನಿಜ,ಆದರೆ ಮುಹೂರ್ತಕ್ಕೆ ಅನುಗುಣವಾಗಿ ಮದುವೆ ನೆರವೇರಿದೆ. ನವ ಜೋಡಿ ಮಳೆಯಲ್ಲೇ ಮದುವೆ ವೇದಿಕೆಗೆ ಹತ್ತಿದ್ದಾರೆ.ಅವರನ್ನು ನೃತ್ಯದ ಮೂಲಕ ಕಲಾವಿದರು ಸ್ವಾಗತ ಕೋರಿದ್ದಾರೆ. ಮಳೆಯಲ್ಲೇ ವೆಡ್ಡಿಂಗ್ ವಿಡಿಯೋಸ್ ಗಳು ಶೂಟ್ ಆಗಿದ್ದು, ಮಳೆಯಲ್ಲೇ ಮದುವೆ ಆದ ಸುಂದರ ಕ್ಷಣವನ್ನು ನಿರೂಪಕ ಜೈ ಕರ್ಮಣಿ ಅವರು ʼʼನಿಮ್ಮ ಪ್ರೀತಿಪಾತ್ರರನ್ನು ಮದುವೆಯಾಗಲು ಯಾವುದೂ ತಡೆಯುವುದಿಲ್ಲ” ಎಂದು ಬರೆದುಕೊಂಡು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.