ನ್ಯೂಸ್ನಾಟೌಟ್: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಆರಂಭಿಸಿದ ಸೌಲಭ್ಯವನ್ನು ಮಂಗಮ್ಮ ಬಳಸಿಕೊಂಡಿದ್ದರು. ಮನೆಯಲ್ಲಿಯೇ ಕುಳಿತು ತಮ್ಮ ಹಕ್ಕನ್ನು ಚಲಾಯಿಸಿ ಬುಧವಾರ ಮತದಾನ ಮಾಡಿದ್ದರು.
ಮಧ್ಯಾಹ್ನ 12:19 ಕ್ಕೆ ಮತ ಹಾಕಿ 12:50 ಕ್ಕೆ ಕೊನೆಯುಸಿರೆಳೆದ ಇವರು ವಯೋಸಹಜ ಕಾಯಿಲೆಗಳಿಂದ ಹಾಸಿಗೆ ಹಿಡಿದಿದ್ದ ಅಜ್ಜಿ ಮಂಗಮ್ಮ ತಮ್ಮ ಬದುಕಿನ ಕೊನೆಯ ಕ್ಷಣಗಳಲ್ಲೂ ಮತದಾನದ ಹಕ್ಕು ಚಲಾಯಿಸಿದ್ದಾರೆ ಪ್ರಜಾಪ್ರಭುತ್ವದ ಅರ್ಥ ಬರುವಂತೆ ಒಂದು ಉತ್ತಮ ಉದಾಹರಣೆಯಾಗಿದ್ದಾರೆ.
ಮಧ್ಯಾಹ್ನ 12:19 ಕ್ಕೆ ಮತ ಹಾಕಿದ 82 ವರ್ಷದ ಮಂಗಮ್ಮ 12:50 ಕ್ಕೆ ಕೊನೆಯುಸಿರೆಳೆದಿದ್ದಾರೆ ಎನ್ನುವುದು ದುಃಖಕರ. ಅವರು ಸಿಂಧನೂರು ಕ್ಷೇತ್ರದ ಮತಗಟ್ಟೆ ಸಂಖ್ಯೆ 84 ರ ವ್ಯಾಪ್ತಿಯಲ್ಲಿ ಮತದಾನ ಮಾಡಿದ್ದಾರೆ. ಎಂದು ವರದಿ ತಿಳಿಸಿದೆ.