ನ್ಯೂಸ್ ನಾಟೌಟ್: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಮಡಿಕೇರಿ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಲೆದರ್ ಬಾಲ್ -ಟಿ10 ಸೋಮವಾರದ ಜಿಪಿಎಲ್ ಕ್ರಿಕೆಟ್ನ ಮೂರನೇ ಪಂದ್ಯಾಟದಲ್ಲಿ ಕೆಜಿಎಸ್ ಸ್ಟ್ರೈಕರ್ಸ್ (KGS strikers ) ಮತ್ತು ಎಲೈಟ್ ತಂಡದ ನಡುವಿನ ಸೆಣಸಾಟದಲ್ಲಿ ಎಲೈಟ್ ತಂಡ ಗೆಲುವು ಸಾಧಿಸಿತು.
ಟಾಸ್ ಗೆದ್ದ ಎಲೈಟ್ ತಂಡ ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡಿತು. ನಿಗದಿತ 10 ಓವರ್ ಗಳಲ್ಲಿ ಬ್ಯಾಟ್ ಮಾಡಿದ ಕೆಜಿಎಸ್ ಸ್ಟ್ರೈಕರ್ಸ್ (KGS strikers) ಎರಡು ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿತು. ಐಕಾನ್ ಆಟಗಾರ ಚೆರೆಮನೆ ನಯನ್ 41(25) ರನ್ ಗಳಿಸಿದರು. ನಂತರ ಬ್ಯಾಟ್ ಮಾಡಿದ ಎಲೈಟ್ ತಂಡ 9.2 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 80 ರನ್ ಪಡೆದು ಜಯಗಳಿಸಿತು.
ಅವಿನ್ ಮಾಲಿ 30(23) ರನ್, ತಳೂರು ವಿಕ್ಕ್ಕಿ 23(23) ರನ್ ಗಳಿಸಿದರು. KGS ಪರವಾಗಿ ಜನನ್ ಪಾರೆಮಜಲು 1 ವಿಕೆಟ್ ಪಡೆದರು. ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಎಲೈಟ್ ತಂಡದ ಲೋಕೇಶ್ ಕೊಡಂಜೆ ಪಡೆದರು.
ಈ ಪೂಲ್ ನಲ್ಲಿ ಬಿಳಿಗೇರಿ ಪ್ಲಾಂಟರ್ಸ್ ಕ್ಲಬ್ ಮತ್ತು KGS strikers ಪಂದ್ಯಾಟದಿಂದ ನಿರ್ಗಮಿಸಿತು. ಎಲೈಟ್ ತಂಡ ಮತ್ತು MCB ತಂಡ ಟೇಬಲ್ ಟಾಪರ್ ಆಗಿ ಹೊರಹೊಮ್ಮಿದೆ.
ನಾಳೆ (23.ಮೇ) ಮಡಿಕೇರಿ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೯ ಗಂಟೆಗೆ ಕಾಫಿ ಕ್ರಿಕೆಟರ್ಸ್ (Coffee cricketers) ಮತ್ತು ಕುಕ್ಕುನೂರು( kukkunuru) ತಂಡಗಳು ಆಡಲಿವೆ. ನಂತರ, ಬೆಳಿಗ್ಗೆ ೧೧ ಗಂಟೆಗೆ ಜಿ ಕಿಂಗ್ಸ್ (G Kings) ಮತ್ತು ಕುಕ್ಕುನೂರು( kukkunuru) ತಂಡಗಳು ಸೆಣಸಾಡಲಿವೆ ಎಂದು ವರದಿ ತಿಳಿಸಿದೆ.