ನ್ಯೂಸ್ ನಾಟೌಟ್ : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.ಇದರಲ್ಲಿ ಬಜರಂಗಳ ಬ್ಯಾನ್ ಭರವಸೆ ಕೂಡ ಒಂದು.ಇದಕ್ಕೆ ಸಂಬಂಧಿಸಿದಂತೆ ಬಿಜೆಪಿಗರು ಕೆಂಡಾಮಂಡಲರಾದರೆ ಕೆಲ ಹಿಂದೂ ಮುಖಂಡರು ಕೂಡ ಇದನ್ನು ತೀವ್ರವಾಗಿ ಖಂಡಿಸಿದ್ದಾರೆ.
ಬಿಜೆಪಿ ಆಢಳಿತಾವಧಿಯಲ್ಲಿ ತಂದಿರುವ ಕಾನೂನು ಹಾಗೂ ಯೋಜನೆಗಳನ್ನು ನಿಷೇಧಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ.ಬಜರಂಗದಳ ಬ್ಯಾನ್ ಮಾಡೋ ಕಾಂಗ್ರೆಸ್ ಪ್ರಣಾಳಿಕೆ ವಿಚಾರವಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ಮಾಧ್ಯಮ ಜೊತೆ ಮಾತನಾಡಿದ್ದಾರೆ.ಈ ಕುರಿತು ಮಾತನಾಡಿದ ಮುತಾಲಿಕ್ ಅವರು, ಪಿಎಫ್ ಐ ಭಯೋತ್ಪಾದಕ ಸಂಘಟನೆ ದೇಶದ್ರೋಹದ ಹಿನ್ನಲೆಯಲ್ಲಿ ಬ್ಯಾನ್ ಆಗಿದೆ. ಕರ್ನಾಟಕದ 30 ಕೊಲೆಗಳಲ್ಲಿ 11 ಕೊಲೆಗಳಲ್ಲಿ ಪಿಎಫ್ಐ ಹೆಸರಿದೆ. ಇಂಥಾ ದೇಶದ್ರೋಹದ ಸಂಘಟನೆ ಜೊತೆಗೆ ಬಜರಂಗದಳ ಹೋಲಿಸ್ತೀರಾ? ಎಂದು ಕಾಂಗ್ರೆಸ್ ಪಕ್ಷಕ್ಕೆ ಕಿಡಿಕಾರಿದ್ದಾರೆ.
ಕಾಂಗ್ರೆಸ್ನವರೇ ನೀವು ಏನಂದುಕೊಂಡಿದ್ದೀರಾ? ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಹುಟ್ಟಿದ ಸಂಘಟನೆ ಇದು. ಇಂಥಾ ಸಂಘಟನೆ ಬ್ಯಾನ್ ಅನ್ನೋದು ಹಿಂದೂಗಳಿಗೆ ದ್ರೋಹ ಮಾಡಿದಂತೆ. ನಿಮಗೆ ತಾಕತ್ತಿದ್ದರೆ ಬಜರಂಗದಳ ಬ್ಯಾನ್ ಮಾಡಿ ಎಂದು ಸವಾಲು ಹಾಕಿದ್ದಾರೆ.ಕಾಂಗ್ರೆಸ್ ನಲ್ಲಿರೋ ಹಿಂದೂಗಳು ಇದನ್ನ ಅರ್ಥಮಾಡಿಕೊಳ್ಳಿ. ಕಾಂಗ್ರೆಸ್ ಈ ಹೇಳಿಕೆ ವಾಪಾಸ್ ಪಡೆದು ಕ್ಷಮೆ ಕೇಳಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.