ನ್ಯೂಸ್ ನಾಟೌಟ್ : ಅಪ್ರಾಪ್ತೆಗೆ 20 ಬಾರಿ ಇರಿದು, ನಂತರ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಇದೀಗ ವರದಿಯಾಗಿದೆ. ದೆಹಲಿಯ ಶಹಾಬಾದ್ ಡೈರಿ ಪ್ರದೇಶದಲ್ಲಿ ಈ ದುರಂತ ನಡೆದಿದ್ದು, ಮೃತ ಬಾಲಕಿಯನ್ನು ಸಾಕ್ಷಿ(16) ಎಂದು ಗುರುತಿಸಲಾಗಿದೆ.ಸಾಹಿಲ್ ಆಕೆಯನ್ನು ಹತ್ಯೆಗೈದ ಆರೋಪಿ.
ಆರೋಪಿ ಸಾಹಿಲ್ ನ ಈ ಕೃತ್ಯದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತನ್ನ ಮನೆಯ ಹೊರಗೆ ಅಪ್ರಾಪ್ತೆಗೆ ಇರಿದ ನಂತರ ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿ ಆಕೆಯ ಮುಖವನ್ನು ಜಜ್ಜಿ ಹಾಕಿದ್ದಾನೆ ಎಂದು ತಿಳಿದು ಬಂದಿದೆ. ದಾರಿಹೋಕರ ಮುಂದೆಯೇ ಈ ಭೀಕರ ಕೃತ್ಯ ನಡೆಸಿದ್ದ ಎನ್ನುವುದಕ್ಕೆ ಸಿಸಿ ಕ್ಯಾಮರಾವೂ ಪ್ರತ್ಯಕ್ಷ ಸಾಕ್ಷಿ ನುಡಿಯುತ್ತಿದೆ.ಆದರೂ ದಾರಿಹೋಕರು ಏನು ಮಾಡಲಾಗದೇ ಅಸಹಾಯಕತೆಯಿಂದ ದುಷ್ಕರ್ಮಿಯು ಹೇಯ ಕೃತ್ಯ ನಡೆಸುತ್ತಿರುವುದನ್ನು ನೋಡಿ ದಿಗ್ಭ್ರಮೆಗೊಂಡರು.
ಈ ಕುರಿತು ಮಾತನಾಡಿರುವ ಪೊಲೀಸರು, ಮೃತ ಸಾಕ್ಷಿ ಹಾಗೂ ಆಕೆಯ ಬಾಯ್ಫ್ರೆಂಡ್ ಸಾಹಿಲ್ ನಿನ್ನೆ ಸಾಯಂಕಾಲ ಜಗಳವಾಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆ ಆಕೆಯನ್ನು ಆತ ಕೊಲೆಗೈದು ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.