ನ್ಯೂಸ್ ನಾಟೌಟ್: 25 ವರ್ಷದ ಪುತ್ರನೊಬ್ಬ ತನ್ನ ತಾಯಿಯನ್ನೇ ಸುಮಾರು 80 ಕ್ಕೂ ಹೆಚ್ಚು ಬಾರಿ ಚೂರಿಯಿಂದ ಇರಿದು ಕೊಂದ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ಭಾನುವಾರ ನಡೆದಿದೆ.
ಈ ಘಟನೆ ರಾಜಸ್ಥಾನದ ಬಿಲ್ವಾರಾ ಪುರ್ ಟೌನ್ನಲ್ಲಿರುವ ಶಂಕರ್ ಲಾಲ್ ಮನೆಯಲ್ಲಿ ನಡೆದಿದೆ.
ಪತಿ ಲಾಲ್ ಮಾರುಕಟ್ಟೆಗೆ ತೆರಳಿದ್ದರು. ಇತ್ತ ಆಕೆ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲೆಂದು ಅಣ್ಣನ ಮನೆಗೆ ತೆರಳಲು ಬಟ್ಟೆ ಪ್ಯಾಕ್ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಪುತ್ರ ಸುನೀಲ್, ಮದುವೆಗೆ ಹೋಗುವುದು ಬೇಡ ಎಂದು ಅಮ್ಮನ ಜೊತೆ ಗಲಾಟೆ ಮಾಡಿದ್ದಾನೆ.
ಪರಿಣಾಮ ಅಮ್ಮ-ಮಗನ ಮಧ್ಯೆ ಜಗಳ ಶುರುವಾಗಿ, ಈ ಜಗಳ ತಾರಕಕ್ಕೇರಿದ್ದರಿಂದ ಸಿಟ್ಟಿಗೆದ್ದ ಪುತ್ರ ಅಡುಗೆ ಮನೆಯಲ್ಲಿದ್ದ ಚಾಕು ತಂದು ಅಮ್ಮನಿಗೆ ಸುಮಾರು 80ಕ್ಕೂ ಹೆಚ್ಚು ಬಾರಿ ಇರಿದು ಕೊಂದಿದ್ದಾನೆ ಎಂದು ವರದಿ ತಿಳಿಸಿದೆ. ಆತನ ತಾಯಿ ತೀವ್ರ ರಕ್ತಶ್ರಾವದಿಂದ ಮೃತಪಟ್ಟಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಕಂಪ್ಯೂಟರ್ ಕೋರ್ಸ್ ಮುಗಿಸಿರುವ ಆರೋಪಿ ನಿರುದ್ಯೋಗಿಯಾಗಿದ್ದನು ಎಂದು ತಂದೆ ಲಾಲ್ ತಿಳಿಸಿದ್ದಾರೆ. ಇನ್ನೋರ್ವ ಪುತ್ರ ವಿನೋದ್ ನೀಡಿದ ದೂರಿನಂತೆ ಪೊಲೀಸರು ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.