ನ್ಯೂಸ್ ನಾಟೌಟ್: ಬಾಡಿಗೆ ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ ಕಳವಾದ ಘಟನೆ ಮಂಗಳೂರಿನ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕ ನಗರದಲ್ಲಿ ನಡೆದಿದೆ ಎಂದು ಗುರುವಾರ ವರದಿ ತಿಳಿಸಿದೆ.
ಬಾಡಿಗೆ ಮನೆಯಲ್ಲಿದ್ದ ಮಹಿಳೆ ಮೇ 16ರಂದು ಬೆಳಗ್ಗೆ 11ಕ್ಕೆ ಬೀಗ ಹಾಕಿ ಆಸ್ಪತ್ರೆಯಲ್ಲಿರುವ ತನ್ನ ತಾಯಿಯನ್ನು ನೋಡಿಕೊಂಡು ಬರಲು ಆಸ್ಪತ್ರೆಗೆ ಹೋಗಿದ್ದರು. ರಾತ್ರಿ 10 ಗಂಟೆಗೆ ವಾಪಸಾಗಿದ್ದರು. ಆಗ ಬೀಗ ಯಥಾಸ್ಥಿತಿಯಲ್ಲಿತ್ತು.
ಮೇ 18ರಂದು ಸಂಜೆ ಚಿನ್ನಾಭರಣ ಇಡುವ ಕಬ್ಬಿಣದ ಕಪಾಟಿನ ಬಾಗಿಲು ತೆರೆದು ನೋಡಿದಾಗ ಅದರಲ್ಲಿದ್ದ 32 ಗ್ರಾಂ ತೂಕದ ಒಂದು ಚಿನ್ನದ ನೆಕ್ಲೇಸ್, ಮಗುವಿನ ಚಿನ್ನದ ಉಂಗುರಗಳು, ಪೆಂಡೆಂಟ್ ಸೇರಿದಂತೆ ಒಟ್ಟು ಸುಮಾರು 41 ಗ್ರಾಂ ತೂಕದ, 2.29 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.