ನ್ಯೂಸ್ ನಾಟೌಟ್ : ವಿಧಾನಸಭಾ ಚುನಾವಣೆಗೆ ಇನ್ನೇನು ಕಲವೇ ದಿನಗಳು ಬಾಕಿ ಉಳಿದಿವೆ.ಮೇ 10ರಂದು ಚುನಾವಣೆಯು ನಡೆಯಲಿದೆ.ಆದರೆ ರಾಜ್ಯದಲ್ಲಿ ಆಗುತ್ತಿರುವ ಚುನಾವಣೆ ಜನರ ಸಮಸ್ಯೆಗಳ ಮೇಲೆ ಆಗಬೇಕಾಗಿದೆ.ಪಾರ್ಲಿಮೆಂಟಿನ ನಾಯಕತ್ವದಲ್ಲಿ ನಡೆಯುತ್ತಿದೆಯೆಂದರೆ ರಾಜ್ಯ ವಿಧಾನಸಭೆಗಳಿಗಾಗಲಿ ಅಥವಾ ಅಲ್ಲಿನ ನಾಯಕರಿಗೆ ಆಗಲಿ ಯಾವುದೇ ಬೆಲೆಯಿಲ್ಲದಾಗಬಹುದು.ಸಿಐಟಿಯು ಹೇಳುವುದೇನೆಂದರೆ ಜನರ ಸಮಸ್ಯೆಗಳನ್ನು ಅರಿತುಕೊಂಡು ಬಡವರು, ಕಾರ್ಮಿಕರು, ಮಧ್ಯಮ ವರ್ಗದವರು ಮತದಾನ ಮಾಡಬೇಕಾಗಿದೆ.ಅವರು ಸಮಸ್ಯೆ ಅರಿತುಕೊಂಡು ಮತದಾನ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸಿಐಟಿಯು ಅಧ್ಯಕ್ಷ ಕೆ.ಪಿ. ಜಾನಿ ಹೇಳಿದ್ದಾರೆ.
ಜನಸಾಮಾನ್ಯರ ಸಮಸ್ಯೆಗಳ ಪಟ್ಟಿ ಬೆಲೆಯುತ್ತಲೇ ಇದೆ.ದಿನಸಿ ತರಕಾರಿ ಬೆಲೆ ಗಗನಕ್ಕೇರುತ್ತಿದೆ.ಜಿಎಸ್ಟಿ ಹಾಕಲಾಗಿದೆ.ಇನ್ನು ಗ್ಯಾಸ್,ಪೆಟ್ರೋಲ್ ಬೆಲೆಯೂ ದಿನದಿಂದ ದಿನಕ್ಕೆ ಏರುತ್ತಲೇ ಇದೆ.2014ರಲ್ಲಿ 410ರೂ ಇದ್ದ ಗ್ಯಾಸ್ ಬೆಲೆ ಈಗ 1200 ಆಗಿದ್ದ ಬೆಲೆ ಏರಿಸಿದವರ ವಿರುದ್ಧ ನಮ್ಮ ಮತವಾಗಲಿದೆ. ಡಿಸೇಲ್ 50 ರಿಂದ 88ರೂ ಗೆ ಏರಿಸಲಾಗಿದೆ, ಪೆಟ್ರೋಲ್ 66 ರಿಂದ 102 ಕ್ಕೆ ಏರಿಸಲಾಗಿದೆ. ಅನ್ನಭಾಗ್ಯದ ಅಕ್ಕಿಯನ್ನು ಕಡಿತ ಮಾಡಲಾಗಿದೆ ಎಂದು ಹೇಳಿದರು.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರ ಭದ್ರತೆಗಾಗಿ ಸಂಗ್ರಹಿಸಲ್ಪಟ್ಟ ಹಣ ಅತೀ ಅಗತ್ಯವಾದ ವಿಚಾರಗಳಿಗೆ ಅರ್ಜಿ ಹಾಕಿ ಕಾಯುತ್ತಿದ್ದರೂ ಬಿಡುಗಡೆ ಮಾಡದೇ ರಾಜಕೀಯ ಉದ್ದೇಶಕ್ಕಾಗಿ ದುರುಪಯೋಗವಾಗುತ್ತಿದೆ.ಔಷಧ ಬೆಲೆಯನ್ನು ಗಗನಕ್ಕೇ ಏರಿಸಲಾಗಿದೆ. ಇನ್ಶೂರೆನ್ಸ್ ದರವನ್ನು ಅಮಾನವೀಯವಾಗಿ ಏರಿಸಲಾಗಿದ್ದು,ಜನಸಾಮಾನ್ಯರು ಪರದಾಡುವಂತಾಗಿದೆ. ರೈತರ ಸಾಲ ಮನ್ನಾ ಮಾಡಿ ಎಂದು ಅನೇಕ ಬಾರಿ ಹೇಳಿದರೂ ಪ್ರತಿಭಟನೆಗಳಾದರೂ ಕ್ಯಾರೆ ಅನ್ನುತ್ತಿಲ್ಲ. ರೈತರು ಸೋಮಾರಿಗಳಾಗುತ್ತಾರೆ ಎಂದು ಜವಾಬ್ದಾರಿ ವಂಚಿತರಾಗುತ್ತಿದ್ದಾರೆ ಎಂದರು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರು, ಬಡವರಿಗೆ ತೊಂದರೆಯನ್ನುಂಟು ಮಾಡಿರುವವರ ವಿರುದ್ಧ ಮತ ಚಲಾಯಿಸಬೇಕು ಎಂದು ಅವರು ಈ ವೇಳೆ ತಿಳಿಸಿದರು.