ನ್ಯೂಸ್ ನಾಟೌಟ್:: ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನಲ್ಲಿ 2023-24 ನೇ ಶೈಕ್ಷಣಿಕ ವರ್ಷದಲ್ಲಿ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಮೇ 29 ರಂದು ಹಮ್ಮಿಕೊಳ್ಳಲಾಯಿತು.
ಕೆ.ವಿ.ಜಿ ಚಾರಿಟೇಬಲ್ ಟ್ರಸ್ಟ್ ನ ಆಡಳಿತ ಮುಖ್ಯಸ್ಥರು ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷರಾದ ಆದ ಡಾ. ರೇಣುಕಾ ಪ್ರಸಾದ್ ಕೆ ವಿ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದ ಡಾ. ಉಜ್ವಲ್ ಯು ಜೆ ಅವರು ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸುಳ್ಯ ತಾಲೂಕಿನ ಏಕೈಕ ಇಂಟಿಗ್ರೇಟೆಡ್ ಕಾಲೇಜಾದ ಅಮರಜ್ಯೋತಿ ಕಾಲೇಜಿನಲ್ಲಿ ನೀಡುತ್ತಿರುವ ಗುಣಮಟ್ಟದ ಶಿಕ್ಷಣದಿಂದಾಗಿ ಈ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿ ದುಪ್ಪಟ್ಟು ಏರಿಕೆಯಾಗಿರುವುದು ಕಾಲೇಜಿನ ಉನ್ನತಿಗೆ ಸಾಕ್ಷಿಯಾಗಿದೆ. JEE/NEET ಹಾಗೂ CET ತರಬೇತಿ ಗಳಲ್ಲದೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ADVANCED TALLY , C A ಫೌಂಡೇಶನ್ ಕೋರ್ಸ್,ADVANCED TALLY ಪ್ರತಿದಿನವೂ ಈ ಎಲ್ಲಾ ತರಬೇತಿಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿದ್ದು, ಸುಳ್ಯ ದಂತಹ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ವರದಾನವಾಗಲಿದೆ ಎಂದರು.
ವಿದ್ಯಾರ್ಥಿಗಳಿಗೆ ಶಿಸ್ತುಬದ್ಧ ಜೀವನದ ಮಹತ್ವದ ಕುರಿತಂತೆ ಹಾಗೂ ಹೆತ್ತವರ ಜವಾಬ್ದಾರಿ ನಿರ್ವಹಣೆ ಬಗ್ಗೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು . ಕಾಲೇಜಿನ ಉಪಪ್ರಾಂಶುಪಾಲರಾದ ದೀಪಕ್ ವೈ ಆರ್ ಕಾಲೇಜಿನ ದೈನಂದಿನ ಶೈಕ್ಷಣಿಕ ವೇಳಾಪಟ್ಟಿ ಹಾಗೂ ಶಿಸ್ತು ನಡವಳಿಕೆಗಳ ಬಗ್ಗೆ ಮಾಹಿತಿ ನೀಡಿದರು. ಉಪನ್ಯಾಸಕಿ ಶ್ರೀಮತಿ ಭವ್ಯ ರವರು JEE/NEET/CET ಬಗ್ಗೆ ಸವಿವರವಾದ ಮಾಹಿತಿ ನೀಡಿದರು.
ವಾಣಿಜ್ಯ ವಿದ್ಯಾರ್ಥಿಗಳ ಕುರಿತಂತೆ ಶ್ರೀನಿಧಿ ಮಾತನಾಡಿ C A foundation ಹಾಗೂ Advanced Tally ಬಗ್ಗೆ ಮಾಹಿತಿ ನೀಡಿದರು. ಸಭಾಧ್ಯಕ್ಷತೆ ವಹಿಸಿದ್ದ ಡಾ. ಯಶೋದಾ ರಾಮಚಂದ್ರರವರು ಮಾತನಾಡಿ 8ನೇ ವರ್ಷಕ್ಕೆ ಪ್ರವೇಶ ಮಾಡಿರುವ ಅಮರಜ್ಯೋತಿ ಕಾಲೇಜು ಉತ್ತಮ ಫಲಿತಾಂಶದೊಂದಿಗೆ ಉಜ್ವಲ ಭವಿಷ್ಯದತ್ತ ದೃಢ ಹೆಜ್ಜೆಯನಿಡುತ್ತಿದ್ದು, ಸುಳ್ಯ ಮಾತ್ರವಲ್ಲದೆ ದೂರದ ಬೆಂಗಳೂರು, ಮೈಸೂರು, ಕೋಲಾರ,ಕೊಡಗು ಹಾಗೂ ಹಾಸನ, ಹೊರರಾಜ್ಯ ಹಾಗೂ ಹೊರರಾಷ್ಟ್ರ ಗಳಿಂದಲೂ ಕೂಡ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿರುವುದು ಅತೀವ ಹೆಮ್ಮೆ ತಂದಿದೆ.ಮಾತ್ರವಲ್ಲದೆ ಸುಳ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಅಮರಜ್ಯೋತಿ ಪಿಯು ಕಾಲೇಜು ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದರು.