ನ್ಯೂಸ್ ನಾಟೌಟ್ : ಕೇರಳದ ಮೊದಲ ತೃತೀಯಲಿಂಗಿ ಬಾಡಿಬಿಲ್ಡರ್ ಶರಣಾಗಿದ್ದಾರೆ. ಮೃತರನ್ನು ಪ್ರವೀಣ ನಾಥ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಪ್ರವೀಣ್ ನಾಥ್ ಅವರು ನಗರದ ಉಪನಗರ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ದೇಹವನ್ನು ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಪ್ರವೀಣ್ ಈ ವರ್ಷ ಪ್ರೇಮಿಗಳ ದಿನದಂದು ವಿವಾಹವಾಗಿದ್ದರು. ಕೆಲ ಮಾಧ್ಯಮಗಳ ವರದಿ ಪ್ರಕಾರ ಇಬ್ಬರ ನಡುವಿನ ಸಂಬಂಧ ಉತ್ತಮವಾಗಿರಲಿಲ್ಲ ಎನ್ನಲಾಗಿತ್ತು, ಆದರೆ ಈ ವರದಿಗಳನ್ನು ಪ್ರವೀಣ್ ನಿರಾಕರಿಸಿದ್ದರು.ಪ್ರವೀಣ್ ರಿಶಾನಾ ಆಯೇಶು ಅವರನ್ನು ಮದುವೆಯಾಗಿದ್ದರು, ಇವರು ಮಿಸ್ಟರ್ ಕೇರಳ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಇದಲ್ಲದೇ ರಿಶಾನಾ ಮಿಸ್ ಮಲಬಾರ್ ಪಟ್ಟ ಗೆದ್ದಿದ್ದಾರೆ. ಆರಂಭದಲ್ಲಿ ಇಬ್ಬರ ಮನೆಯವರು ಇವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ, ನಂತರ ಅವರು ಈ ಮದುವೆಗೆ ಒಪ್ಪಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರವೀಣ್ ಹುಟ್ಟಿದ್ದು ಹೆಣ್ಣಾದರೂ ಗಂಡಾಗಿ ಇರಬೇಕೆಂಬ ಆಸೆ. ಒಂದು ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು, ಬಳಿಕ ತಮಗೆ ತಾವು ಸಮಾಧಾನ ಮಾಡಿಕೊಂಡು ದೇಹದ ರೂಪಾಂತರ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.