ನ್ಯೂಸ್ ನಾಟೌಟ್: ಕಾರ್ಕಳದ ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್ ಅವಧಿಯಲ್ಲಿ ಈಗಾಗಲೇ ಕಾರ್ಕಳ ಸಾಕಷ್ಟು ಅಭಿವೃದ್ಧಿಯಾಗಿದೆ. ಕ್ಷೇತ್ರದಲ್ಲಿರುವ ದೇವಾಲಯಗಳ ಅಭಿವೃದ್ಧಿಯ ಬಗ್ಗೆ ಕಾಂಗ್ರೆಸ್ನಲ್ಲಿರುವ ಕೆಲವರು ಅಪಸ್ವರವೆತ್ತಿರುವುದು ಮಾತ್ರ ವಿಪರ್ಯಾಸ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ನ್ಯೂಸ್ ನಾಟೌಟ್ ತಿಳಿಸಿದ್ದಾರೆ.
ಕಾರ್ಕಳದ ಪುರಾತನ ದೇಗುಲ ಶ್ರೀ ಮಾರಿಯಮ್ಮ ದೇವಳ ಇಡೀ ಕಾರ್ಕಳ ಕ್ಷೇತ್ರದ ಭಕ್ತರಿಗೆ ಸಂಬಂಧಿಸಿದ್ದು, ಸರ್ವ ಭಕ್ತರ ನೆರವಿನಿಂದ ಭಕ್ತರ ಆಶಯದಂತೆ, ಸರ್ಕಾರದ ಸಹಕಾರ ಪಡೆದು ದೇವಿ ದೇಗುಲದ ಜೀರ್ಣೋದ್ಧಾರ ನಡೆಸಿ, ಬ್ರಹ್ಮಕಲಶ ಮಾಡಲಾಗಿತ್ತು. ಆದರೆ ಈಗ ಇಷ್ಟು ದೊಡ್ಡ ದೇವಸ್ಥಾನ, ವೈಭವ ಬೇಕಿತ್ತಾ? ಎಂದೆಲ್ಲ ದೇವಸ್ಥಾನದ ಅಭಿವೃದ್ಧಿಯನ್ನೇ ಸಹಿಸದ ಕಾಂಗ್ರೆಸ್ಸಿಗರು ಪ್ರಶ್ನೆ ಮಾಡುತ್ತಿದ್ದಾರೆ ಎಂದರು.
ಕಾರ್ಕಳದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಹಿಂದು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಾಗಿವೆ. ಆದರೆ ಇದನ್ನು ಕಾಂಗ್ರೆಸ್ಸಿಗರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಬಿಜೆಪಿಯವರ ಅಭಿವೃದ್ಧಿಯಲ್ಲ ಎಂದು ಕೊಂಕು ಮಾತುಗಳನ್ನಾಡುತ್ತಿವೆ. ಇಂತಹ ಮಾತುಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಹಾವೀರ ಹೆಗ್ಡೆ ತಿಳಿಸಿದ್ದಾರೆ.
ಕಾರ್ಕಳದಲ್ಲಿ ಬಿಜೆಪಿ ಮಾಡಿರುವಷ್ಟು ಅಭಿವೃದ್ಧಿ ಕಾಂಗ್ರೆಸ್ , ಜೆಡಿಎಸ್ ಪಕ್ಷ ಬಂದರೂ ಸಾಧ್ಯವಿಲ್ಲ. ಸುನಿಲ್ ಕುಮಾರ್ ಗೆಲುವು ಸಾಧಿಸಿದರೆ ಮಾತ್ರ ಕಾರ್ಕಳ ಇನ್ನಷ್ಟು ಅಭಿವೃದ್ಧಿಯಾಗಲು ಸಾಧ್ಯ. ಈ ಸಲ ಕಾರ್ಕಳದಲ್ಲಿ ಬಿಜೆಪಿ ಗೆದ್ದೆ ಗೆಲ್ಲುತ್ತದೆ ಎಂದು ಮಹಾವೀರ ಹೆಗ್ಡೆ ಹೇಳಿದರು. ಸುನಿಲ್ ಕುಮಾರ್ ಆಡಳಿತದಲ್ಲಿ ಪ್ರವಾಸಿಗರಿಗೆ ಪರಶುರಾಮ್ ಥೀಮ್ ಪಾರ್ಕ್, ಮಾರಿ ಗುಡಿ, ರಸ್ತೆ ಮತ್ತು ನೀರಿನ ಟ್ಯಾಂಕ್ , ಸರ್ಕಾರಿ ಅಸ್ಪತ್ರೆ ಅಭಿವೃದ್ಧಿ ಕೊರೋನಾ ಸಮಯದಲ್ಲಿ ನಿದ್ದೆಗೆಟ್ಟು ಜನರಿಗೋಸ್ಕರ ಕೆಲಸ ಮಾಡಿದ ಜನ ನಾಯಕ ಸುನಿಲ್ ಕುಮಾರ್ ಅವರನ್ನು ಕ್ಷೇತ್ರದ ಜನತೆ ಎಂದೂ ಮರೆಯಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.