ನ್ಯೂಸ್ನಾಟೌಟ್: ಬಿಜಿಪಿ ಅಭ್ಯರ್ಥಿ ವಿ ಸುನೀಲ್ ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂತವಾರ ಮತ್ತು ಮಿಯ್ಯಾರು ಗ್ರಾಮದ ಮತದಾರರನ್ನು ಭೇಟಿ ಮಾಡಿ ಬುಧವಾರ ಅವರ ಕುಂದು – ಕೊರತೆಗಳನ್ನು ಆಲಿಸುವ ಮುಖಾಂತರ ಚುನಾವಣಾ ಪ್ರಚಾರ ಸಭೆ ನಡೆಸಿದರು.
ಸ್ವರ್ಣ ಕಾರ್ಕಳಕ್ಕೆ 06 ಮೇ 2023 ಶನಿವಾರ. ಮಧ್ಯಾಹ್ನ 2.30 ಕ್ಕೆ ಆಗಮಿಸಲಿರುವ ಯೋಗಿ ಆದಿತ್ಯನಾಥ್ ಅವರನ್ನು ನಾವೆಲ್ಲರೂ ಒಟ್ಟು ಸೇರಿ ಸ್ವಾಗತಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕಾಂತಾವರ, ಮಿಯ್ಯಾರು ಗ್ರಾಮದ ಜನರಲ್ಲಿ ವಿ ಸುನೀಲ್ ಕುಮಾರ್ ಕೇಳಿಕೊಂಡರು.
“ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ” ಎಂಬ ಘೋಷವಾಕ್ಯವನ್ನು ಕೂಗುವ ಮೂಲಕ ಮತದಾರರಲ್ಲಿ ಜನನಾಯಕ ವಿ ಸುನೀಲ್ ಕುಮಾರ್ ಉತ್ಸಾಹ ತುಂಬಿದರು.ಮೇ10 ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಮೂಲ್ಯವಾದ ಮತವನ್ನು ನೀಡಿ ಕಾರ್ಕಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತೆ ಕೇಳಿಕೊಂಡರು ಎಂದು ವರದಿ ತಿಳಿಸಿದೆ.