ನ್ಯೂಸ್ ನಾಟೌಟ್ : ಕಾರೊಂದು ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಸಂಭವಿಸಿದೆ.ಕಡಬದ ಮರ್ದಾಳ ಸಮೀಪದ ನೆಕ್ಕಿತಡ್ಕ ಎಂಬಲ್ಲಿ ಈ ದುರಂತ ಸಂಭವಿಸಿದ್ದು, ಕರೆಂಟು ಕಂಬ ಮುರಿದು ಬಿದ್ದು ಮೆಸ್ಕಾಂ ಇಲಾಖೆಗೆ ಅಪಾರ ನಷ್ಟ ಉಂಟಾಗಿದೆ.
ರಸ್ತೆಗೆ ಮೋರಿ ಅಳವಡಿಸುವ ಕಾಮಗಾರಿ ನಡೆಯುವ ಸ್ಥಳದ ಸಮೀಪ ಕಾರು ಅಪಘಾತಕ್ಕಿಡಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆ ಬಿರುಸಿನ ಮಳೆ ಸುರಿದಿದ್ದು, ಕಾರು ಸೈಡ್ ಕೊಡುವಾಗ ಮೋರಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಈ ಅಪಘಾತ ನಡೆದಿದೆ.ಪಂಜ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ ಕಾರು ಇದಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಕಾಮಗಾರಿ ಮುಗಿಯದೆ ಇರುವುದೇ ವಾಹನ ಅಪಘಾತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.