ನ್ಯೂಸ್ ನಾಟೌಟ್ : ದೇವಸ್ಥಾನದ ಗರ್ಭಗುಡಿಯಲ್ಲಿ ರಕ್ತ ಹಾಗೂ ಮಾಂಸ ಸುರಿದು ವಿಕೃತಿ ಮೆರೆದ ಘಟನೆ ಚಿಕ್ಕಬಳ್ಳಾಪುರದ ಮಳಮಾಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಳ್ಳಾಫುರ ಜಿಲ್ಲೆ ಶಿಡ್ಲಘಟ್ಟದ ಮಳಮಾಚನಹಳ್ಳಿ ಗ್ರಾಮದ ಬ್ಯಾಟರಾಯಸ್ವಾಮಿ ದೇವಸ್ಥಾನದಲ್ಲಿ ದುಷ್ಕರ್ಮಿಗಳು ಗರ್ಭಗುಡಿಯ ಕಿಟಕಿಯಿಂದ ರಕ್ತ ಹಾಗೂ ಮಾಂಸ ಸುರಿದಿರುವುದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳ ವಿಕೃತಿಗೆ ಗ್ರಾಮಸ್ಥರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ರಕ್ತ ಹಾಗೂ ಮಾಂಸ ಪ್ರಾಣಿಗಳದ್ದೋ ಅಥವಾ ಮನುಷ್ಯರದ್ದೋ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ದೇವರ ಮೂರ್ತಿಯ ಪಾದದವರೆಗೂ ರಕ್ತದ ಕೊಡಿ ಹರಿದಿದೆ.