ನ್ಯೂಸ್ ನಾಟೌಟ್ : ದೋಣಿಯೊಂದು ಮುಳುಗಿ 21 ಮಂದಿ ಸಾವನ್ನಪ್ಪಿದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತಾನೂರು ಬಳಿ ನಡೆದಿದೆ. ದುರ್ಘಟನಾ ಸ್ಥಳದಲ್ಲಿ ಇನ್ನೂ ಹಲವರು ನೀರಿನಲ್ಲಿ ಮುಳುಗಿದ್ದಾರೆನ್ನುವ ಸಂಶಯವಿದ್ದು,ರಕ್ಷಣಾಕಾರ್ಯ ಭರದಿಂದ ಸಾಗುತ್ತಿದೆ.
ವರದಿಗಳ ಪ್ರಕಾರ ದೋಣಿಯಲ್ಲಿ ಸುಮಾರು 40 ಮಂದಿ ಇದ್ದರು ಎನ್ನಲಾಗಿದೆ.ರಾತ್ರಿ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ತಿಳಿದು ಬಂದಿದೆ.ರಾತ್ರಿ ಅಪಘಾತ ಸಂಭವಿಸಿದ್ದರಿಂದ ರಕ್ಷಣೆ ಮಾಡಲು ಕಷ್ಟವಾಗಿದೆ ಎಂದು ಕೇರಳ ಸಚಿವ ಅಬ್ದುಲ್ ರಹ್ಮಾನ್ ತಿಳಿಸಿದ್ದಾರೆ. ಇಂದು ಘಟನಾ ಸ್ಥಳಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿ ನೀಡಿದ್ದು,ದುರಂತ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ರದ್ದು ಮಾಡಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಕೂಡ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.