ನ್ಯೂಸ್ ನಾಟೌಟ್: ಮೇ 14ರಂದು ನಿಧನರಾಗಿದ್ದ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸಕ್ರಿಯ ಕಾರ್ಯಕರ್ತ ನಿತಿನ್ ಪೂಜಾರಿ ಸರಪಾಡಿ ಅವರ ಕುಟುಂಬಕ್ಕೆ ಹಿಂದೂ ಟೂರಿಸ್ಟ್ ಅಸೋಸಿಯೇಶನ್ ಚಾಲಕ ಮಾಲಕರು ಸೇರಿ ಸಂಗ್ರಹಿಸಿದ ರೂ.1 ಲಕ್ಷವನ್ನು ಶುಕ್ರವಾರ ನಿತಿನ್ ತಾಯಿ ಕೈಯಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಸ್ತಾಂತರಿಸಿದರು.
ಕರೋನಾ ಸಂದರ್ಭ ನಿರಂತರ ಆ್ಯಂಬುಲೆನ್ಸ್ ಡ್ರೈವರ್ ಆಗಿ ಹಲವಾರು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಹಾಗೂ ಶವ ಸಂಸ್ಕಾರ ಮಾಡುವ ಸೇವೆಗೆ ನಿತಿನ್ ಪೂಜಾರಿ ಸಹಕರಿಸಿದ್ದರು.
ನಿತಿನ್ ತಾಯಿ ಹಾಗೂ ಕುಟುಂಬಸ್ಥರಿಗೆ ಅರುಣ್ ಕುಮಾರ್ ಪುತ್ತಿಲ ಸಾಂತ್ವನ ಹೇಳಿದರು. ಹಿಂದೂ ಟೂರಿಸ್ಟ್ ಅಸೋಸಿಯೇಶನ್ ನ ಪ್ರಮುಖರು ಉಪಸ್ಥಿತರಿದ್ದರು.