ನ್ಯೂಸ್ ನಾಟೌಟ್ : ಫೇಸ್ಬುಕ್ನ ಮಾತೃ ಸಂಸ್ಥೆ ಮೆಟಾ ತಾನು ಈ ಹಿಂದೆ ಘೋಷಿಸಿದ 10,000 ಉದ್ಯೋಗ ಕಡಿತ ಯೋಜನೆಯ ಅಂತಿಮ ಭಾಗವಾಗಿ ಹಲವು ಮಂದಿಯನ್ನು ಕೆಲಸದಿಂದ ಇತ್ತೀಚೆಗೆ ವಜಾ ಮಾಡಿದೆ.
ಈ ಬಾರಿ ಪ್ರಮುಖ ಸ್ಥಾನದಲ್ಲಿರುವ ಭಾರತೀಯರು ಕೆಲಸ ಕಳೆದುಕೊಂಡಿದ್ದಾರೆ. ಭಾರತ ಮಾರ್ಕೆಟಿಂಗ್ ನಿರ್ದೇಶಕ ಅವಿನಾಶ್ ಪಂತ್, ಮಾಧ್ಯಮ ಸಹಯೋಗದ ನಿರ್ದೇಶಕ ಹಾಗೂ ಭಾರತೀಯ ಮೆಟಾ ಮುಖ್ಯಸ್ಥ ಸಾಕೇತ್ ಝಾ ಸೌರಭ್ ಮುಂತಾದವರು ಕೆಲಸ ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಈ ಬಗ್ಗೆ ಮಾಹಿತಿ ಬಯಸಿ ಅವರನ್ನು ಸಂಪರ್ಕಿಸಿದರೂ, ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಮಾರ್ಕೆಟಿಂಗ್, ಸೈಟ್ ಸೆಕ್ಯೂರಿಟಿ, ಎಂಟರ್ಪೈಸ್ ಎಂಜಿನಿಯರಿಂಗ್, ಪ್ರೋಗ್ರಾಂ ಮ್ಯಾನೇಜ್ಮೆಂಟ್, ಕಂಟೆಂಟ್ ಸ್ಟಾಟರ್ಜಿ ಹಾಗೂ ಕಾರ್ಪೊರೇಟ್ ಕಮ್ಯೂನಿಕೇಷನ್ ವಿಭಾಗದ ಹಲವು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.
ಈ ಹಿಂದೆ 11,000 ಉದ್ಯೋಗ ಕಡಿತ ಮಾಡಿದ್ದ ಮೆಟಾ, ಬಳಿಕ 10,000 ಮಂದಿಯನ್ನು ಕೆಲಸದಿಂದ ವಜಾ ಮಾಡುವುದಾಗಿ ಹೇಳಿತ್ತು. ಸತತ ಉದ್ಯೋಗ ಕಡಿತದ ಹೊರತಾಗಿಯೂ, ಕೆಳದೊಂದು ವರ್ಷದಲ್ಲಿ ಮೆಟಾದ ಷೇರು ಮೌಲ್ಯ ದುಪ್ಪಟ್ಟಾಗಿದೆ. ವೆಚ್ಚ ಕಡಿತ ಕ್ರಮ ಹಾಗೂ ಕೃತಕಬುದ್ಧಿ ಮತ್ತೆಯಿಂದಾಗಿ ಕಂಪನಿಯ ಮೌಲ್ಯ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.