ನ್ಯೂಸ್ನಾಟೌಟ್: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕು ಬಾಳುಗೋಡುವಿನಲ್ಲಿ ಶನಿವಾರ ರಾತ್ರಿ ದುಷ್ಕರ್ಮಿಗಳ ಗುಂಡೇಟಿಗೆ 18ರಿಂದ 20 ವರ್ಷದ ಹೆಣ್ಣು ಆನೆಯೊಂದು ಬಲಿಯಾಗಿದೆ.
ಬಾಳುಗೋಡಿನ ಜಗದೀಶ್ ಎಂಬವರಿಗೆ ಸೇರಿದ ತೋಟದಲ್ಲಿ ಆನೆಯನ್ನು ಹತ್ಯೆಗೈಯಲಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆಗಳು ಇತ್ತೀಚಿಗೆ ಈ ಭಾಗದಲ್ಲಿ ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ಬರುವುದು ಸಾಮಾನ್ಯವಾಗಿದೆ. ತೋಟದೊಳಗೆ ಹೋದ ಬಳಿಕ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಆನೆಯ ಹಂತಕರ ಪತ್ತೆಗೆ ಶೋಧ ನಡೆಯುತ್ತಿದೆ.
ಕೊಡಗು ಜಿಲ್ಲಾ ಡಿಎಫ್ಒ ಶಿವರಾಮ್ ಬಾಬು, ವಲಯ ಅರಣ್ಯಾಧಿಕಾರಿ ಶಿವರಾಮ್ , ಉಪವಲಯ ಅರಣ್ಯಾಧಿಕಾರಿಗಳ ಅನಿಲ್ ಡಿಸೋಜ , ದೇವಯ್ಯ, ರಂಜನ್ ಹಾಗೂ ಆರ್ಆರ್ಟಿ ಸಿಬ್ಬಂದಿ ಪರಿಶೀಲಿಸಿದ್ದಾರೆ.