ನ್ಯೂಸ್ ನಾಟೌಟ್ : ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಮುಂದಿನ ಸಿಎಂ ಯಾರು? ಅನ್ನುವ ಚರ್ಚೆ ಜೋರಾಗಿದೆ. ಇದೀಗ ಡಿಕೆ ಶಿವ ಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಪ್ರಬಲ ಪೈಪೋಟಿ ಇದೆ. ಇಬ್ಬರಲ್ಲಿ ಯಾರು ಸಿಎಂ ಆಗ್ತಾರೆ ಅನ್ನುವುದೇ ಕುತೂಹಲದ ಸಂಗತಿ.
ಸಿದ್ದರಾಮಯ್ಯ ಪರ ಅಹಿಂದ ಜನ ಇದ್ದರೆ ಡಿಕೆ ಶಿವ ಕುಮಾರ್ ಪರ ಒಕ್ಕಲಿಗ ಸ್ವಾಮೀಜಿಗಳ ಬೆಂಬಲ ದೊರಕಿದೆ. ಬೆಂಗಳೂರಿನ ವಿಜಯ ನಗರದಲ್ಲಿರುವ ಆದಿಚುಂಚನಗಿರಿ ಮಠದಲ್ಲಿ ಡಿಕೆ ಶಿವ ಕುಮಾರ್ ಆದಿ ಚುಂಚನಗಿರಿಯ ಮಹಾಸ್ವಾಮೀಜಿ ನಿರ್ಮಲಾನಂದನಾಥಶ್ರೀಗಳನ್ನು ಭೇಟಿಯಾಗಿದ್ದಾರೆ. ಒಕ್ಕಲಿಗ ಸಮುದಾಯದ ಬೆಂಬಲ ಬೇಕೆಂದು ಡಿಕೆಶಿ ಸ್ವಾಮೀಜಿಗಳ ಜತೆಗೆ ಕೇಳಿಕೊಂಡಿದ್ದಾರೆ. ಇದಕ್ಕೆ ಸ್ವಾಮೀಜಿಗಳು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.