ಡೆಹ್ರಾಡೂನ್: ಪ್ರಧಾನಿಯ ‘ಮನ್ ಕೀ ಬಾತ್’ ಆಲಿಸದ ಮಕ್ಕಳಿಗೆ ತಲಾ ₹100 ದಂಡ ವಿಧಿಸಲಾಗಿದೆ ಅನ್ನುವ ಸುದ್ದಿ ಹೊರಬಿದ್ದಿದೆ.
ಡೆಹ್ರಾಡೂನ್ನ ಶಾಲೆಯೊಂದರಲ್ಲಿ ಪ್ರಧಾನಿ ಅವರ ಮನ್ ಕೀ ಬಾತ್ ಮಕ್ಕಳು ಆಲಿಸಲಿಲ್ಲ ಎನ್ನುವ ಕಾರಣವೊಡ್ಡಿ ಮಕ್ಕಳಿಗೆ ದಂಡ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಕೆಲವು ವಿದ್ಯಾರ್ಥಿಗಳು ಮನ್ ಕೀ ಬಾತ್ ಆಲಿಸಲು ಬಂದಿರಲಿಲ್ಲ. ಶಾಲೆಗೆ ಬಾರದಿರುವ ಕಾರಣದಿಂದ ಯಾರು ಬಂದಿಲ್ಲ ಅಂತಹ ವಿದ್ಯಾರ್ಥಿಗಳಿಗೆ ದಂಡದ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ಸಂ ಬಂ ಧ ಪೋಷಕರು ಹಾಗೂ ವಿದ್ಯಾರ್ಥಿ ಗಳ ಹಕ್ಕುಗಳ ರಾಷ್ಟ್ರೀಯ ಸಂಘದ ಅಧ್ಯಕ್ಷ ಆರೀಫ್ ಖಾನ್ ಅವರು ಡೆಹ್ರಾಡೂನ್ ಮುಖ್ಯ ಶಿಕ್ಷಣಾಧಿಕಾರಿಗೆ ಪತ್ರ ಬರೆದಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದರಂತೆ ಶಾಲೆಗೆ ನೋ ಟಿಸ್ ಜಾರಿಮಾಡಿರುವ ಶಿಕ್ಷಣ ಇಲಾಖೆಯು,ಮೂರು ದಿನಗಳಲ್ಲಿ ಉತ್ತರ ನೀ ಡುವಂತೆ ಸೂಚಿಸಿದೆ. ಆರೀ ಫ್ ಪ್ರಕಾರ, ಡೆಹ್ರಾಡೂನ್ ನ ಜಿಆರ್ಡಿ ನಿರಂಜನಪುರ ಅಕಾಡೆಮಿಯಲ್ಲಿ ಈ ಘಟನೆ ನಡೆದಿದೆ. ಮಕ್ಕಳಿಗೆ ₹100 ರೂಪಾಯಿ ದಂಡ ಅಥವಾ ವೈ ದ್ಯಕೀಯ ಪ್ರಮಾಣಪತ್ರ ಸಲ್ಲಿಸುವಂತೆ ಶಾಲೆ ಆದೇಶ ಹೊರಡಿಸಿದೆ. ಇದರ ಸ್ಕ್ರೀನ್ಶಾಟ್ ಸಹ ಪೋ ಷಕರು ಹಂಚಿದ್ದಾರೆ ಎಂದು ದೂರಿದ್ದಾರೆ.