ನ್ಯೂಸ್ ನಾಟೌಟ್ : ಸುಳ್ಯ ತಾಲೂಕಿನ ಪೆರುವಾಜೆಯ ಡಾ. ಶಿವರಾಮ ಕಾರಂತ ಸರಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯ ವಿಭಾಗ ಮತ್ತು ಕಾಮರ್ಸ್ ಅಸೋಸಿಯೇಷನ್ ವತಿಯಿಂದ ರಾಜ್ಯ ಮಟ್ಟದ ಅಂತರ್ ಕಾಲೇಜು ಕಾಮರ್ಸ್ ಫೆಸ್ಟ್ ಎಕ್ಸಲೆನ್ಸಿಯಾ ಕಾರ್ಯಕ್ರಮವನ್ನು ಮೇ. 29 ರಂದು ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ ಉದ್ಘಾಟಿಸಿದರು .
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸರಕಾರಿ ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜಿಸುವುದರಿಂದ ವಿಧ್ಯಾರ್ಥಿಗಳಲ್ಲಿ ಬರೀ ಪಠ್ಯೇತರ ಚಟುವಟಿಕೆ ಅಲ್ಲದೆ ತಿಳುವಳಿಕೆಯ ಅರಿವು ಮೂಡಿಸುತ್ತದೆ. ಹಾಗೂ ವಿದ್ಯಾರ್ಥಿಗಳ ನಡೆ ನುಡಿ , ಜೀವನದ ಪಾಠಗಳ ಬಗ್ಗೆ ಹೇಳಿದರು .
ಈ ಸಂದರ್ಭದಲ್ಲಿ ಶಾಸಕಿ ಬಾಗೀರಥಿ ಮುರಳ್ಯ ಅವರಿಗೆ ಕಾಲೇಜಿನ ವತಿಯಿಂದ ಶಾಲು ಹಾಕಿ ಸನ್ಮಾನಿಸಲಾಯಿತು. ಈ ವೇಳೆ ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ದಾಮೋದರ ಕಣಜಾಲು ಅಧ್ಯಕ್ಷತೆ ವಹಿಸಿದರು. ಗ್ರಾಮ ಪಂಚಾಯತ್ ಸದಸ್ಯ ಪದ್ಮನಾಭ ಶೆಟ್ಟಿ ಪೆರುವಾಜೆ , ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಣ್ಣಾಜಿ ಗೌಡ, ಕಾಲೇಜಿನ ಐಕ್ಯುಎಸಿ ಸಂಚಾಲಕಿ ಜ್ಯೋತಿ ಎಸ್ ,ಸಾಂಸ್ಕೃತಿಕ ಸಮಿತಿ ಸಂಚಾಲಕ ಯತೀಶ್ ಕುಮಾರ್ ಎಂ , ವಿದ್ಯಾರ್ಥಿ ,ಕ್ಷೇಮಾಧಿಕಾರಿ ಕಾಂತರಾಜು ಸಿ, ವಾಣಿಜ್ಯ ಸ್ಮಾತಕೋತ್ತರ ವಿಭಾಗದ ಸಂಚಾಲಕಿ ಪ್ರತಿಮಾ ಶೆಟ್ಟಿ , ಕಾಮರ್ಸ್ ಫೆಸ್ಟ್ ಸಂಚಾಲಕ ಶ್ರವಣ್ ಕುಮಾರ್ , ಅರ್ಷಿಯಾ, ಕಾಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಲತೀನ್ ಡಿ, ಕಾರ್ಯದರ್ಶಿ ಶ್ರಯಾ ಉಪಸ್ಥತರಿದ್ದರು.
ಚೈತ್ರಾ ಸ್ವಾಗತಿಸಿ , ಹರ್ಷಿತಾ ವಂದಿಸಿ , ಹರ್ಷಿಯಾ ನಿರೂಪಿಸಿದರು.ಹಾಗೂ ಕೊಡಗು ,ದಕ್ಷಿಣ ಕನ್ನಡ ಸೇರಿ 18 ಕ್ಕೂ ಹೆಚ್ಚು ಕಾಲೇಜಿನಿಂದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.