ನ್ಯೂಸ್ ನಾಟೌಟ್ : ಬೆಳ್ಳಾರೆಯ ಪೆರುವಾಜೆ ಡಾ. ಶಿವರಾಮ ಕಾರಂತ ಸರಕಾರಿ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ 2023-24 ನೇ ಸಾಲಿನ ದಾಖಲಾತಿ ಆರಂಭಗೊಂಡಿದೆ.
1991 ರಲ್ಲಿ ಗ್ರಾಮೀಣಾ ಭಾಗದ ಹಿಂದುಳಿದ ವಿಧ್ಯಾರ್ಥಿಗಳಿಗೆ ವಿದ್ಯಾರ್ಜನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ . ಈ ಕಾಲೇಜು ಸುಸಜ್ಜತವಾದ ಕಟ್ಟಡ, ವಿಶಾಲ ತರಗತಿ ಕೋಣೆಗಳು , ಅನುಭವಿ ಅಧ್ಯಾಪಕ ವೃಂದ, ಕಲಿಕೆಗೆ ಪೂರಕ ವಾತಾವರಣ , ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ , ಗ್ರಂಥಾಲಯ , ಸ್ಮಾರ್ಟ್ ಕ್ಲಾಸ್ ಕೊಠಡಿ ,ಕ್ರೀಡಾ ಚಟುವಟಿಕೆಗೆ ಪೂರಕವಾದ ಕ್ರೀಡಾಂಗಣ , ಕ್ರಿಯಾಶೀಲ ಉದ್ಯೋಗ ಮಾಹಿತಿ , ಮದ್ಯಾಹ್ನದ ಬಿಸಿಯೂಟ ವ್ಯವಸ್ಥೆ , ವಿದ್ಯಾರ್ಥಿಗಳಿಗೆ ಬಿಸಿಎಂ ಹಾಸ್ಟೆಲ್ ವ್ಯವಸ್ಥೆ ಮತ್ತು ಸುಳ್ಯ -ಪುತ್ತೂರು -ಕಡಬ-ಸುಬ್ರಹ್ಮಣ್ಯ -ಸವಣೂರು ಸಾರಿಗೆ ವ್ಯವಸ್ಥೆ ಇದೆ .
ಪದವಿ ವಿಭಾಗದಲ್ಲಿ ಬಿಎ ,ಬಿಕಾಂ, ಬಿಎಸ್ಡಬ್ಲ್ಯೂ , ಕೋರ್ಸುಗಳು .ಸ್ನಾತಕೋತ್ತರ ವಿಭಾಗದಲ್ಲಿ ಎಂ.ಕಾಂ , ಎಂಎಸ್ಡಬ್ಲ್ಯೂ ಕೋರ್ಸ್ಗಳ ಅಧ್ಯಯನ. ಹಾಗೂ ಪ್ರತೀ ಶನಿವಾರ ಕಂಪ್ಯೂಟರ್ ತರಬೇತಿ ಸರ್ಟಿಫಿಕೇಟ್ ಕೋರ್ಸುಗಳು,ಯಕ್ಷಗಾನ ನಾಟ್ಯ ತರಬೇತಿ ,ರಾಷ್ಟ್ರೀಯ ಸೇವಾ ಯೋಜನೆ ,ಯವ ರೆಡ್ ಕ್ರಾಸ್ , ರೋವರ್ಸ್ -ರೇಂಜರ್ಸ್ ವಿದ್ಯಾರ್ಥಿಗಳ ನಾಯಕತ್ವ ಗುಣಕ್ಕೆ ಅವಕಾಶ ಕಲ್ಪಿಸಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ರಾಂಕ್, ಕ್ರೀಡಾ ವಿಭಾಗದಲ್ಲಿ ವಿಶ್ವವಿದ್ಯಾನಿಲಯ ಸಾಧನೆ ,ಎನ್ಎಸ್ಎಸ್ , ರೆಡ್ಕ್ರಾಸ್ ,ರೇಂಜರ್ಸ್ನಲ್ಲಿ ಸಮಾಜಮುಖಿ ಸಾಧನೆ . ಹಾಗೂ ರಾಷ್ಟ್ರೀಯ ಮೌಲ್ಯಾಂಕನ ಸಂಸ್ಥೆ ನ್ಯಾಕ್ನಿಂದ B+ ಗ್ರೇಡ್ ಪಡೆದು ಸಂಸ್ಥೆ ಆಶಯ ತಾಣವಾಗಿದೆ.
ವಿದ್ಯಾರ್ಥಿವೇತನ , ವಿದ್ಯಾರ್ಥಿನಿಯರು ತಾವು ಪಾವತಿಸಿದ ಶುಲ್ಕ ಮರುಪಾವತಿ , ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಷೇಶ ವೇತನ , LMS ಮೂಲಕ ಆನ್ಲೈನ್ ತರಬೇತಿ .