ನ್ಯೂಸ್ ನಾಟೌಟ್ : ಕಬ್ಬಿಣದ ರಾಡ್ನಿಂದ ಮಹಿಳೆಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ತಾಲೂಕಿನ ಸಿದ್ದಲಿಂಗಪುರ ಗ್ರಾಮದಲ್ಲಿ ನಡೆದಿದೆ. ಆರೋಪಿ ಪರಾರಿಯಾಗಿದ್ದು, ಇದೀಗ ಪೊಲೀಸರು ಆತನನ್ನ ಬಂಧಿಸಿದ್ದಾರೆ. ಪಾಂಡವಪುರ ತಾಲೂಕಿನ ಕೆರೆತೊಣ್ಣೂರು ಗ್ರಾಮದ ಮಮತಾ(32) ಮೃತ ದುರ್ದೈವಿ.
ಕೊಲೆಯಾದ ಮಹಿಳೆ ಮಮತಾ ಗಂಡನಿಂದ ದೂರ ಇದ್ದಳು.ಈ ಹಿನ್ನಲೆ ಆಕೆಯ ಜೊತೆ ಸಂಬಂಧ ಬೆಳೆಸಿದ್ದ ಆರೋಪಿ ಮೋಹನ.ಇವರಿಬ್ಬರು ಸಿದ್ದಲಿಂಗಪುರದಲ್ಲಿ ಒಟ್ಟಾಗಿ ಬೇಕರಿ ನಡೆಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ನಿನ್ನೆ ಸಂಜೆ ಏಕಾಏಕಿ ಮಾತಿಗೆ ಮಾತು ಬೆಳೆದು ಮಮತಾಳನ್ನು ಹತ್ಯೆಗೈದು ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ತುಂಬಾ ಸಮಯಗಳಿಂದ ಇಬ್ಬರು ಸೇರಿ ಸಿದ್ದಲಿಂಗಪುರದಲ್ಲಿ ಬೇಕರಿಯನ್ನು ನಡೆಸುತ್ತಿದ್ದು, ಮೇ.24 ರ ಸಂಜೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿದೆ ಎಂದು ತಿಳಿದು ಬಂದಿದೆ. ಬಳಿಕ ಕೋಪದಿಂದ ಮೋಹನ್ ಕಬ್ಬಿಣದ ರಾಡ್ನಿಂದ ಬಲವಾಗಿ ತಲೆಗೆ ಹೊಡೆದೆ ಬಿಟ್ಟಿದ್ದು,ಆಕೆ ನೆಲಕ್ಕೆ ಬಿದ್ದಿದ್ದಾಳೆ ಎಂದು ತಿಳಿದು ಬಂದಿದೆ. ಯುವತಿ ಸ್ಥಳದಲ್ಲೆ ಮೃತಪಟ್ಟಿದ್ದು, ಆರೋಪಿ ಮೋಹನ್ ಪರಾರಿಯಾಗಿದ್ದ.ಘಟನಾ ಸ್ಥಳಕ್ಕೆ ಮೇಟಗಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.