ನ್ಯೂಸ್ ನಾಟೌಟ್ : ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ವಿಧಾನ ಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ. ತಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದ ಬಜರಂಗದಳ ಬ್ಯಾನ್ ಘೋಷಣೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಆಶ್ಚರ್ಯಕರ ಉತ್ತರ ನೀಡುವ ಮೂಲಕ ಮುಂದಿನ ಕ್ರಮದ ಬಗ್ಗೆ ಸುಳಿವು ನೀಡಿದರು.
ಬಜರಂಗದಳ ಅಥವಾ ಪಿಎಫ್ ಐ ಯಂತಹ ಯಾವುದೇ ಸಂಘಟನೆಗಳು ಹಿಂದು ಅಥವಾ ಮುಸ್ಲಿಮರಿಗೆ ಹೊಂದಿದ್ದಾಗಿದ್ದರೂ, ಯಾರು ಕೋಮುವಾದ ಮಾಡುತ್ತಾರೆ, ಯಾರು ಅಶಾಂತಿ ರಾಜಕಾರಣದಲ್ಲಿ ತೊಡಗಿಕೊಳ್ಳುತ್ತಾರೆ ಅಂತವರಿಗೆ ಮಾತ್ರ ಬ್ಯಾನ್ ಮಾಡುತ್ತೇವೆ ಎಂದು ಹೇಳಿರೋದು ಎಂದು ಸಿದ್ದರಾಮಯ್ಯ ತಿಳಿಸಿದರು.
ಬಜರಂಗದಳ ಬ್ಯಾನ್ ಘೋಷಣೆಯ ಬೆನ್ನಲ್ಲೇ ಚುನಾವಣಾ ಪ್ರಚಾರದಲ್ಲಿದ್ದ ಡಿಕೆ ಶಿವಕುಮಾರ್ ಹೆಲಿಕಾಪ್ಟರ್ ಮೇಲೆ ಹದ್ದಿನ ದಾಳಿಯಾಗಿತ್ತು ಮತ್ತು ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡಿತ್ತು, ಈ ಎಲ್ಲಾ ವಿದ್ಯಮಾನಗಳನ್ನು ಬಜರಂಗ ಬಲಿಯ ಕೋಪವೆಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಣ್ಣಿಸಲಾಗಿತ್ತು. ಆದರೆ ಕಾಂಗ್ರೆಸ್ ಪಕ್ಷದ ಗೆಲುವಿನ ಬಳಿಕ ಸಿದ್ದರಾಮಯ್ಯ ಬಜರಂಗದಳ ಬ್ಯಾನ್ ಕುರಿತು ಸುಳಿವು ನೀಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹು ಮತಗಳಿಂದ ಗೆದ್ದ ಬಳಿಕ ಯಾವುದೇ ಸಂಘನೆಗಳು ಜಾತ್ಯಾತೀತವಾಗಿರಬೇಕು ಕೋಮುವಾದಕ್ಕೆ ಪ್ರಜೋದನೆ ನೀಡಬಾರದು. ಪಿಎಫ್ಐ ಮತ್ತು ಬಜರಂಗದಳವನ್ನು ನಾವು ಹೋಲಿಕೆ ಮಾಡಬಾರದು, ರಾಜ್ಯದ ಶಾಂತಿಗೆ ಭಂಗ ತರುವ ಯಾವುದೇ ಸಂಘಟನೆಯಾದರೂ ಅದರ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿಯವರಿಗೆ ಬೇರೆಯಾವುದೇ ಅಭಿವೃದ್ಧಿ ಪರ ಕೆಲಸ ಮಾಡಿದ ಬಗ್ಗೆ ಹೇಳಿಕೊಳ್ಳಲು ವಿಷಯಗಳಿಲ್ಲ ಅದಕ್ಕೆ ಈ ರೀತಿ ಗೊಂದಲ ಸೃಷ್ಟಿಸಿ ಅದನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಾರೆ ಎಂದು ಈ ಬಗ್ಗೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.