ನ್ಯೂಸ್ ನಾಟೌಟ್: ಖೋಟಾ ನೋಟು ಮತ್ತು ಕಪ್ಪು ಹಣದ ನಿರ್ಮೂಲನೆಗಾಗಿ ಕೇಂದ್ರ ಸರಕಾರ 2016ರಲ್ಲಿ ಘೋಷಿಸಿದ್ದ ರೂ. 2,000 ನೋಟು ವಾಪಸ್ ಆಗಿರುವ ಬೆನ್ನಲ್ಲೇ ಬದಲಾವಣೆಗೆ ಸೋಮವಾರದಿಂದ ಅವಕಾಶ ನೀಡಲಾಗಿದೆ.
ಜನರು ತಮ್ಮ ನೋಟುಗಳನ್ನು ಬ್ಯಾಂಕ್ಗಳಿಗೆ ಹೋಗಿ ಬದಲಾಯಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಂದು ನಿಗದಿತ ರಿಕ್ವೆಸ್ಟ್ ಫಾರ್ಮ್ ಬಿಡುಗಡೆ ಮಾಡಿದೆ. ಅದನ್ನು ಭರ್ತಿ ಮಾಡಿ ಬ್ಯಾಂಕಿಗೆ ಸಲ್ಲಿಸುವ ಮೂಲಕ ನೋಟುಗಳ ಬದಲಾವಣೆಯನ್ನು ಮಾಡಿಕೊಳ್ಳಬಹುದು. ಬ್ಯಾಂಕ್ಗಳಿಗೆ ತೆರಳಿ ವಿನಿಯಮ ಮಾಡಿಕೊಳ್ಳುವವರಿಗೆ ಮಾತ್ರ ಈ ಅವಕಾಶ ಅನ್ವಯವಾಗಲಿದೆ.
- ರೂ. 2,000 ನೋಟುವಿನಿಮಯ ಫಾರ್ಮ್ ನಲ್ಲಿ ನೋಟುಗಳನ್ನು ಜಮೆ ಮಾಡುವ ಬ್ಯಾಂಕ್ ಹಾಗೂ ಶಾಖೆಯ ಹೆಸರನ್ನು ಬರೆಯಬೇಕು. ತಮ್ಮ ಸನಿಹದ ಯಾವುದಾದರೂ ಬ್ಯಾಂಕ್ಗೆ ಹೋಗಿ ನೋಟು ವಿನಿಮಯ ಮಾಡಿಕೊಳ್ಳಬಹುದು.
- ನಂತರ ಖಾತೆದಾರರು ತಮ್ಮ ಖಾತೆ ಯಾವುದೇ ಬ್ಯಾಂಕ್ನಲ್ಲಿದ್ದರೂ ನಮೂದಿಸಬೇಕು.
- ಖಾತೆದಾರರು ತಮ್ಮ ಖಾತೆಯನ್ನು ಸಂಪೂರ್ಣ ಹೆಸರನ್ನು ಇಂಗ್ಲಿಷ್ ಕ್ಯಾಪಿಟಲ್ ಅಕ್ಷರಗಳಲ್ಲಿ ಬರೆಯಬೇಕು
- ಆರು ನಿರ್ದಿಷ್ಟ ಐಡಿ ಪ್ರೂಫ್ ನಿಗದಿಪಡಿಸಿದ್ದು ಅದರಲ್ಲಿ ಐಡಿ ಪ್ರೂಫ್ ನೀಡುತ್ತಿದ್ದೇವೆ ಎಂಬುದನ್ನು ಅಲ್ಲಿರುವ ಬಾಕ್ಸ್ ನಲ್ಲಿ ಟಿಕ್ ಮಾರ್ಕ್ ಮಾಡಬೇಕು. ಉದಾಹರಣೆಗೆ ಡಿಎಲ್, ಆಧಾರ್ ಕಾರ್ಡ್, ವೋಟರ್ ಐಡಿ, ನರೇಗಾ, ಪಾಸ್ ಪೋರ್ಟ್.
- ಐಡಿ ಪ್ರೂಫ್ ನ ನಂಬರ್ ಅನ್ನು ಫಾರ್ಮ್ ನಲ್ಲಿ ದಾಖಲಿಸಬೇಕು. ಟಿಕ್ ಮಾಡಿದ ಐಡಿ ಪ್ರೂಫ್ ಅನ್ನು ಕೌಂಟರ್ನಲ್ಲಿ ತೋರಿಸಬೇಕು.
- ರೂ. 2,000 ರೂ. ನೋಟಿನ ವಿನಿಮಯ ಮಾಡಿಕೊಳ್ಳುತ್ತಿದ್ದೇವೆ? ಅದರ ಮೌಲ್ಯ ಎಷ್ಟು ಎಂಬುದನ್ನು ಬರೆಯಬೇಕು. ಫಾರ್ಮ್ ಗೆ ಸಹಿ ಹಾಕಬೇಕು.
- ಸ್ಥಳ ಹಾಗೂ ದಿನಾಂಕ ಬರೆದು ಬ್ಯಾಂಕ್ ಸಿಬ್ಬಂದಿಗೆ ನೀಡಬೇಕು. ಬಳಿಕ ನೋಟಿನ ಮೌಲ್ಯವನ್ನು ಬ್ಯಾಂಕ್ ಸಿಬ್ಬಂದಿ ಎಣಿಸಿ ಬದಲಿ ನೋಟನ್ನು ನೀಡುತ್ತಾರೆ.