ನ್ಯೂಸ್ ನಾಟೌಟ್ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಡಿ.ಕೆ.ಶಿವ ಕುಮಾರ್ ಗೂನಡ್ಕ ಮೂಲದ ವಹೀದಾ ಆರಿಸ್ ಅವರನ್ನು ಕೆಪಿಸಿಸಿ ಕಾನೂನು ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಿದ್ದಾರೆ.
ಡಿ.ಕೆ ಶಿವಕುಮಾರ್ ಅವರ ಆದೇಶದ ಮೇರೆಗೆ ರಾಜ್ಯಾಧ್ಯಕ್ಷ ಎ ಎಸ್ ಪೊನ್ನಣ್ಣ ನೇಮಕಗೊಳಿಸಿದ್ದಾರೆ. ಸದ್ಯ ವಹೀದಾ ಅವರು ಉದ್ಯಾನನಗರಿಯ ಹೈಕೋರ್ಟ್ ನಲ್ಲಿ ನ್ಯಾಯವಾದಿಯಾಗಿ ಹದಿನೆಂಟು ವರ್ಷಗಳಿಂದ ದುಡಿಯುತ್ತಿದ್ದಾರೆ. ವಹೀದಾ ಆರಿಸ್ ಬೆಂಗಳೂರಿನ ಫಾರ್ಮಡ್ ಗ್ರೂಪ್ ಮಾನವ ಸಂಪಸ್ಮೂಲದ ವಿಭಾಗದ ಜನರಲ್ ಮ್ಯಾನೇಜರ್ ಸಂಪಾಜೆ ಗ್ರಾಮದ ಪೇರಡ್ಕ ತೆಕ್ಕಿಲ್ ಮೂಸನ್ ಹಾಜಿ ಯವರ ಪುತ್ರ ತೆಕ್ಕಿಲ್ ಆರಿಸ್ ಪೇರಡ್ಕ ಪತ್ನಿಯಾಗಿದ್ದಾರೆ. ಪ್ರಸ್ತುತ ಬೆಂಗಳೂರಿನ ರಾಮ್ ಮೂರ್ತಿ ನಗರದಲ್ಲಿ ವಾಸವಾಗಿದ್ದಾರೆ. ಪುತ್ರ ಅರ್ಮನ್ ಆರಿಸ್ ತೆಕ್ಕಿಲ್ ಮತ್ತು ಪುತ್ರಿ ಅರ್ವ ಆರಿಸ್ ತೆಕ್ಕಿಲ್ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.