ನ್ಯೂಸ್ ನಾಟೌಟ್ :ಕೆಲವರಿಗೆ ಬೈಕ್ ಸ್ಟಂಟ್ ಮಾಡುವ ಕ್ರೇಜ್ ಇರುತ್ತೆ ನಿಜ. ಆದರೆ ಈ ತರಹದ ಹುಚ್ಚಾಟ ಎಂದಿಗೂ ಇರಬಾರದು.ಇಲ್ಲೊಬ್ಬ ಯುವಕನ ಬೈಕ್ ಸ್ಟಂಟ್ ನೋಡಿದ್ರೆ ನೀವು ನಿಬ್ಬೆರಗಾಗುತ್ತೀರಿ.ಮಾತ್ರವಲ್ಲ ಆತ ಬದುಕಿ ಬಂದದ್ದೇ ಹೆಚ್ಚು ಎಂಬಂತಿದೆ.ಜತೆಗೆ ಇಬ್ಬರು ಹುಡುಗಿಯರನ್ನು ಸೇರಿಸಿ ಈತ ಸ್ಟಂಟ್ ಮಾಡೋದಕ್ಕೆ ಹೊರಟು ಪೇಚಿಗೆ ಸಿಲುಕಿದ್ದಾನೆ.
ವಾಹನ ಸಂಚಾರ ಜಾಸ್ತಿ ಇರುವ ರಸ್ತೆಗಳಲ್ಲೂ ಬೈಕ್ ವೀಲ್ಹಿಂಗ್, ಅಪಾಯಕಾರಿ ಸಾಹಸಗಳನ್ನು ಮಾಡುವ ಮೂಲಕ ಹುಚ್ಚಾಟ ಆಡುವುದು ಅಕ್ಷಮ್ಯ ಅಪರಾಧ. ವೃತ್ತಿಪರರು ಅಲ್ಲದವರು, ಹೀಗೆ ಬ್ಯುಸಿ ರೋಡ್ನಲ್ಲಿ ಬೈಕ್ ಸ್ಟಂಟ್ ಮಾಡುವುದು ಅಪರಾಧವಾಗಿದ್ದರೂ ಒಂದಷ್ಟು ಯುವಕರು ಡೋಂಟ್ ಕೇರ್ ಎನ್ನದೇ ಬೈಕ್ ಸಾಹಸ ಮಾಡಿ ಸೋಶಿಯಲ್ ಮೀಡಿಯಾ ಮೂಲಕ ಅಪ್ ಲೋಡ್ ಮಾಡುತ್ತಾರೆ.ಆದರೆ ಮುಂಬಯಿಯ ಈ ಯುವಕ ಇನ್ನೂ ಅತಿರೇಕ ಅನ್ನಿಸುವಂಥ ಸಾಹಸ ಮಾಡಿದ್ದಾನೆ.ಇಬ್ಬರು ಯುವತಿಯರನ್ನು ಬೈಕ್ ಮೇಲೆ ಕೂರಿಸಿಕೊಂಡು, ವ್ಹೀಲಿಂಗ್ ಮಾಡಿದ್ದಾನೆ.
ಆ ಯುವತಿಯರು ಸರಿಯಾಗಿ ಕುಳಿತಿಲ್ಲ. ಹುಡುಗ ಬೈಕ್ನ ಮಧ್ಯೆ ಕುಳಿತಿದ್ದರೆ, ಒಬ್ಬಳು ಯುವತಿ ಆತನ ಮುಂಭಾಗದಲ್ಲಿ, ಎದೆಗೆ ಅಪ್ಪಿಕೊಂಡು ಕುಳಿತಿದ್ದಾಳೆ. ಇನ್ನೊಬ್ಬಳು ಹಿಂಭಾಗದಲ್ಲಿ ಕುಳಿತಿದ್ದಾಳೆ. ಈ ಯುವಕ ಬೈಕ್ನ ಮುಂದಿನ ಚಕ್ರವನ್ನು ಮೇಲಕ್ಕೆತ್ತಿ ರೈಡ್ ಮಾಡಿದ್ದಾನೆ. ಮೂವರೂ ಹೆಲ್ಮೆಟ್ ಧರಿಸಿಲ್ಲ. ಅದೂ ಕೂಡ ನಗರದ ಮಧ್ಯದಲ್ಲಿರುವ ರಸ್ತೆಯಂತೆ ಕಾಣುತ್ತಿದೆ.ಇದು ಪೊಲೀಸರ ಕೆಂಗಣ್ಣಿಗೂ ಗುರಿಯಾಗಿದೆ.
@PotholeWarriors Foundation ಎಂಬ ಟ್ವಿಟರ್ ಅಕೌಂಟ್ನಲ್ಲಿ ಮೊದಲು ಈ ವಿಡಿಯೊ ಶೇರ್ ಆಗಿತ್ತು. ‘ಇದು ನಿಜಕ್ಕೂ ಅಪಾಯಕಾರಿ ಸಾಹಸ’ ಎಂದು ಕ್ಯಾಪ್ಷನ್ ಕೂಡ ಬರೆಯಲಾಗಿತ್ತು. ಹಾಗೇ, ಬೈಕ್ ನಂಬರ್ (Mh01DH5987)ನ್ನೂ ಕೊಟ್ಟು, ಈತನನ್ನು ಹಿಡಿಯಿರಿ ಎಂದು ಹೇಳಿ ‘ಮುಂಬಯಿ ಟ್ರಾಫಿಕ್ ಪೊಲೀಸ್’ ಟ್ಟಿಟರ್ ಅಕೌಂಟ್ನ್ನು ಟ್ಯಾಗ್ ಮಾಡಲಾಗಿತ್ತು. ಬಳಿಕ ವಿಡಿಯೊವನ್ನು ಮುಂಬಯಿ ಸಂಚಾರಿ ಪೊಲೀಸರು ರೀಶೇರ್ ಮಾಡಿಕೊಂಡಿದ್ದು, ‘ಈ ಮೂವರ ವಿರುದ್ಧವೂ ಬಿಕೆಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರನ್ನು ಪತ್ತೆ ಹಚ್ಚುವ ಸಂಬಂಧ ತನಿಖೆ ನಡೆಯುತ್ತಿದೆ.