ನ್ಯೂಸ್ ನಾಟೌಟ್ : ವಿವಾಹಿತ ಮಹಿಳೆಯೊಬ್ಬರು ತವರು ಮನೆಗೆ ಬಂದಿದ್ದು,ಕಾಣೆಯಾಗಿರುವ ಘಟನೆ ಉಪ್ಪಿನಂಗಡಿ ಸಮೀಪದ ಬಿಳಿಯೂರು ಗ್ರಾಮದಿಂದ ವರದಿಯಾಗಿದೆ. ಕಾನ ಮನೆ ನಿವಾಸಿ ಶ್ವೇತಾ(೨೪) ನಾಪತ್ತೆಯಾದ ಮಹಿಳೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಹಿಳೆಯ ತಂದೆ ಅಣ್ಣು ಮೇರ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.ಆಕೆ ವಿವಾಹಿತೆಯಾಗಿದ್ದು, ಗಂಡನ ಮನೆಯಿಂದ ತವರು ಮನೆಗೆ ಬಂದಿದ್ದರು.ಏ.೨೪ರಂದು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಎಲ್ಲಿಯಾದರೂ ಕಂಡಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.