ನ್ಯೂಸ್ ನಾಟೌಟ್ : ಭಾರತದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತದೆ. ಹಲಸೂರು ಬಜಾರ್ ಅಂಚೆ ಕಚೇರಿಯು ಇಡೀ ಭಾರತದಲ್ಲಿಯೇ ಮೊದಲ 3ಡಿ-ಮುದ್ರಿತ ಸಾರ್ವಜನಿಕ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.ಹಲಸೂರಿನ ಕೇಂಬ್ರಿಡ್ಜ್ ಲೇಔಟ್ ನಲ್ಲಿ ಈ ವಿಶೇಷ ಅಂಚೇ ಕಚೇರಿ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತದೆ.
ಕೇವಲ 30 ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೇ 6 ರಂದು ಕರ್ನಾಟಕವು ತನ್ನ ಮೊದಲ 3D ಕಾಂಕ್ರೀಟ್-ಮುದ್ರಿತ ಸಾರ್ವಜನಿಕ ಕಟ್ಟಡವನ್ನು ಹೊಂದಲಿದೆ. 3ಡಿ ಮುದ್ರಿತ ಅಂಚೆ ಕಛೇರಿಯು ಸುಮಾರು 1100 ಚದರ ಅಡಿ ವಿಸ್ತೀರ್ಣ ಮತ್ತು ನಿರ್ಮಾಣದ ವೆಚ್ಚ 23 ಲಕ್ಷ ರೂಪಾಯಿ ಎಂದು ವರದಿ ತಿಳಿಸಿದ್ದು,ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಹೊಸ ತಂತ್ರಜ್ಞಾನ ಬಳಕೆ ಬೆಂಗಳೂರಿಗರಲ್ಲಿ ಕುತೂಹಲ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗಿದೆ.
ಈ ಪೋಸ್ಟ್ ಆಫೀಸನ್ನು ಸುಮಾರು 23 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.ಸಾಮಾನ್ಯವಾಗಿ ಅಂಚೆಕಚೇರಿಗೆ ನಿರ್ಮಾಣವಾಗುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ 3D ಪ್ರಿಂಟಿಂಗ್ ತಂತ್ರಜ್ಞಾನದಲ್ಲಿ ಅಂಚೆ ಕಚೇರಿ ನಿರ್ಮಾಣವಾಗಲಿದ್ದು, ಇತರೆ ಸಾಮಾನ್ಯ ಅಂಚೆ ಕಚೇರಿ ನಿರ್ಮಿಸಲು ಮಾಡಬೇಕಿರುವ ವೆಚ್ಚಕ್ಕಿಂತ ಈ ತಂತ್ರಜ್ಞಾನದಿಂದ ಶೇಕಡ 30-40 ಕಡಿಮೆ ವೆಚ್ಚದಲ್ಲಿ ಪೋಸ್ಟ್ ಆಫೀಸ್ ನಿರ್ಮಿಸಬಹುದು ಎನ್ನಲಾಗುತ್ತಿದೆ. ಕಳೆದ ವಾರ 3D ಪ್ರಿಂಟಿಂಗ್ ನಿರ್ಮಾಣ ಕಾರ್ಯದ ವೀಡಿಯೊವನ್ನು ಅಲ್ಲಿನ ನಿವಾಸಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇದು ವ್ಯಾಪಕ ವೈರಲ್ ಆಗಿತ್ತು.