ನ್ಯೂಸ್ ನಾಟೌಟ್ : ಟ್ವಿಟ್ಟರ್ ಸಂಸ್ಥೆಯ ಸಿಇಒ ಎಲಾನ್ ಮಸ್ಕ್ ಹಲವು ಕಾರಣಗಳಿಗಾಗಿ ಅಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಟ್ವಿಟ್ಟರ್ ನಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಟ್ವಿಟ್ಟರ್ ಇ ಹಿಂದೆ ಹೊಂದಿದ್ದ ತನ್ನ ನೀಲಿ ಹಕ್ಕಿ ಲೋಗೋವನ್ನು ಬದಲಾಯಿಸಿದೆ. ನೀಲಿ ಹಕ್ಕಿ ಸ್ಥಾನದಲ್ಲಿ (“ಡಾಗ್” ಮೀಮ್) ನಾಯಿಯ ಚಿತ್ರ ಪ್ರದರ್ಶಿಸಲಾಗುತ್ತಿದೆ.
ಈ ಕುರಿತಂತೆ ಟ್ವಿಟರ್ ಸಿಇಒ ಎಲಾನ್ ಮಸ್ಕ್ ಕೂರ ದೃಢೀಕರಿಸಿದ್ದು, ಮಾತು ಕೊಟ್ಟಂತೆ ಮಾಡಿರುವುದಾಗಿ ತಿಳಿಸಿದ್ದಾರೆ. ನೀಲಿ ಬಕ್ಕಿ ಬದಲು ಈಗ ಶಿಬಾ ಇನು ಡಾಗ್ ಮೀಮ್ ಕಾಣಿಸಿಕೊಂಡಿದ್ದು, ಇದು ಡಾಗ್ಕಾಯಿನ್ ಕ್ರಿಪ್ಟೋಕರೆನ್ಸಿಯ ಲೋಗೊ ಕೂಡ ಆಗಿದೆ ಎಂದು ಹೇಳಲಾಗಿದೆ. ಈ ಲೋಗೊ ಬದಲಾವಣೆಯು ಟ್ವಿಟರ್ನ ವೆಬ್ ಆವೃತ್ತಿಯಲ್ಲಿ ಮಾತ್ರ ಕಾಣಿಸಿಕೊಂಡಿದ್ದು,ಆ್ಯಪ್ ಆವೃತ್ತಿಯಲ್ಲಿ ಕಾಣಿಸಿಕೊಂಡಿಲ್ಲ.
ತಾನು ಟ್ವಿಟರ್ ಅನ್ನು ಖರೀದಿಸುವ ಮೊದಲು ಟ್ವಿಟ್ಟರಿಗರೊಬ್ಬರೊಂದಿಗಿನ ತಮ್ಮ ಸಂವಹನದ ಸ್ಕ್ರೀನ್ ಶಾಟ್ ಕೂಡ ಶೇರ್ ಮಾಡಿದ ಎಲಾನ್, ʻಮಾತು ಕೊಟ್ಟಂತೆʼ ಎಂದು ಬರೆದುಕೊಂಡಿದ್ದಾರೆ. ಈ ಸಂಭಾಷಣೆಯಲ್ಲಿ ಮಾಸ್ಕ್ ಅವರು ಹೊಸ ಪ್ಲಾಟ್ಫಾರ್ಮ್ನ ಅಗತ್ಯವಿದೆಯೇ ಎಂದು ಕೇಳಿದಾಗ ಆ ಟ್ವಿಟರಿಗ ಪ್ರತಿಕ್ರಿಯಿಸಿ, ಮಸ್ಕ್ ಅವರು ಟ್ವಿಟರ್ ಖರೀದಿಸಿ ಅದರ ನೀಲಿ ಹಕ್ಕಿ ಲೋಗೊ ಅನ್ನು ಡಾಗ್ಗೆ ಬದಲಿಸಬೇಕು ಎಂದಿದ್ದರು.
ಟ್ವಿಟರ್ ತನ್ನ ಲೋಗೊ ಬದಲಾಯಿಸಿದ ಬೆನ್ನಿಗೇ ಡಾಗ್ಕಾಯಿನ್ ಷೇರು ಮೌಲ್ಯ ಶೇ30 ರಷ್ಟು ಏರಿಕೆಯಾಗಿದೆ ಎಂದು ಬ್ಲೂಂಬರ್ಗ್ ವರದಿ ಮಾಡಿದೆ.