ನ್ಯೂಸ್ನಾಟೌಟ್: ಏಪ್ರಿಲ್ 1ರಿಂದ ತಲಪಾಡಿ, ಹೆಜಮಾಡಿ ಮತ್ತು ಗುಂಡ್ಮಿಯಲ್ಲಿರುವ ಮೂರು ಟೋಲ್ ಗೇಟ್ಗಳಲ್ಲಿ ಟೋಲ್ ಶುಲ್ಕ ಪರಿಷ್ಕರಿಸಲಾಗಿದೆ ಎಂದು ನವಯುಗ ಉಡುಪಿ ಟೋಲ್ವೇ ಪ್ರೈವೇಟ್ ಲಿಮಿಟೆಡ್ ತಿಳಿಸಿದೆ.
ತಲಪಾಡಿ ಟೋಲ್ ಪ್ಲಾಜಾ: ಕಾರು, ಜೀಪ್ ವ್ಯಾನ್ ಅಥವಾ ಲಘು ವಾಹನಗಳಿಗೆ ರೂ.50 (ಒನ್-ವೇ) ಮತ್ತು 75 (ಅದೇ ದಿನ ಹಿಂದಿರುಗಿದರೆ), ಮಾಸಿಕ ಪಾಸ್ ಒಂದು ತಿಂಗಳಲ್ಲಿ ಗರಿಷ್ಠ 50 ಬಾರಿಗೆ ರೂ. 1720, ಎಲ್ಸಿವಿ ಮತ್ತು ಮಿನಿ ಬಸ್ಗಳಿಗೆ ಒಂದು ಮಾರ್ಗದ ದರ 80, ಅದೇ ದಿನ ಮರಳಿದರೆ 120, ಮಾಸಿಕ ಪಾಸ್ 2,655, ಬಸ್ ಮತ್ತು ಟ್ರಕ್ಗಳಿಗೆ 165 ಮತ್ತು ಅದೇ ದಿನ ಮರಳಿದರೆ 245, ಮಾಸಿಕ ಪಾಸ್ ಬೆಲೆ 5,420 ಆಗಿದೆ.
ಹೆಜಮಾಡಿ ಟೋಲ್ ಪ್ಲಾಜಾ: ಕಾರು, ಜೀಪ್, ವ್ಯಾನ್ ಅಥವಾ ಲಘು ವಾಹನಗಳಿಗೆ 50 (ಒನ್-ವೇ) ಮತ್ತು 75 (ಅದೇ ದಿನ ಹಿಂತಿರುಗಿದರೆ), ಮಾಸಿಕ ಪಾಸ್ ಒಂದು ತಿಂಗಳಲ್ಲಿ ಗರಿಷ್ಠ 50 ಬಾರಿಗೆ 1,640, ಎಲ್ಸಿವಿ ಮತ್ತು ಮಿನಿ ಬಸ್ಗಳಿಗೆ ಒಂದು ಮಾರ್ಗದ ದರ 80 ಮತ್ತು ಅದೇ ದಿನ ಮರಳಿ ಬಂದರೆ 120, ಮಾಸಿಕ ಪಾಸ್ 2,655, ಬಸ್ ಮತ್ತು ಟ್ರಕ್ಗಳಿಗೆ 165 ಮತ್ತು ಅದೇ ದಿನ ಮರಳಿದರೆ 250, ಮಾಸಿಕ ಪಾಸ್ ಬೆಲೆ 5,560 ಆಗಿದೆ.
ಗುಂಡ್ಮಿ ಟೋಲ್ ಪ್ಲಾಜಾ: ಗುಂಡ್ಮಿ ಟೋಲ್ ಪ್ಲಾಜಾದ ಏಕಮುಖ ಸಂಚಾರಕ್ಕೆ ಕಾರು, ಜೀಪ್ ವ್ಯಾನ್ ಅಥವಾ ಲಘು ವಾಹನಗಳಿಗೆ 60 ಮತ್ತು 85 (ಅದೇ ದಿನ ಹಿಂತಿರುಗಿದರೆ), ಮಾಸಿಕ ಪಾಸ್ ತಿಂಗಳಿಗೆ ಗರಿಷ್ಠ 50 ಬಾರಿಗೆ 1,930, ಎಲ್ಸಿವಿ ಮತ್ತು ಮಿನಿ ಬಸ್ಗಳಿಗೆ ಏಕಮುಖ ಸಂಚಾರ ದರ 95 ಮತ್ತು ಒಂದೇ ದಿನದ ಹಿಂದುರಿಗೆ ಬಂದರೆ 140, ಮಾಸಿಕ ಪಾಸ್ 3,120, ಬಸ್ ಮತ್ತು ಟ್ರಕ್ಗಳಿಗೆ ಏಕಮುಖ ಸಂಚಾರ 195 ಮತ್ತು ಅದೇ ದಿನ ಮರಳಿ ಬಂದರೆ 295 ಮಾಸಿಕ ಪಾಸ್ನ ಬೆಲೆ 6,540 ಆಗಿದೆ.
2023-24ನೇ ಸಾಲಿನ ಅವಧಿಗೆ ಎಲ್ಲ ಮೂರು ಟೋಲ್ ಪ್ಲಾಜಾದಿಂದ 20 ಕಿ.ಮೀ. ಅಂತರದಲ್ಲಿ ವಾಸಿಸುವ ಸ್ಥಳೀಯ ವಾಣಿಜ್ಯೇತರ ವಾಹನಗಳಿಗೆ ಅನ್ವಯವಾಗುವ ಮಾಸಿಕ ಪಾಸಿನ ದರಗಳು ಪ್ರತಿ ಟೋಲ್ ಪ್ಲಾಜಾಕ್ಕೆ ತಿಂಗಳಿಗೆ 330 ಆಗಿದೆ.