ನ್ಯೂಸ್ ನಾಟೌಟ್: ಕಾರ್ಕಳ ಸ್ವಚ್ಛ ಸುಂದರ ಕಲ್ಪನೆಯೊಂದಿಗೆ ಮೂಡಿದೆ. ಶಾಸಕ ಸುನಿಲ್ ಕುಮಾರ್ ಪ್ರಧಾನಿ ನರೇಂದ್ರ ಮೋದಿಯವರ ಕನಸನ್ನು ತನ್ನ ಊರಿನಲ್ಲಿ ಸಾಕಾರಗೊಳಿಸಲು ಸರ್ವ ಪ್ರಯತ್ನವನ್ನು ನಡೆಸಿ ಭಾಗಶಃ ಯಶಸ್ವಿಯಾಗಿದ್ದಾರೆ ಅನ್ನುವುದನ್ನು ಸ್ಥಳೀಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಹೌದು, ಕಸದ ಸಮಸ್ಯೆ ಇಂದು ಗ್ರಾಮದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೆ ದೊಡ್ಡ ತಲೆನೋವಾಗಿದೆ. ಇಂತಹ ಸಮಸ್ಯೆಯನ್ನು ಬಗೆ ಹರಿಸುವುದು ಸಣ್ಣ ವಿಷಯವಲ್ಲ. ಆದರೆ ಸುನಿಲ್ ಕುಮಾರ್ ಆಡಳಿತದಲ್ಲಿ ಕಾರ್ಕಳದಲ್ಲಿ ರಾಷ್ಟ್ರದ ಮೊದಲ ಗ್ರಾಮೀಣ ಘನತ್ಯಾಜ್ಯ ಘಟಕವನ್ನು ಸ್ಥಾಪಿಸಲಾಗಿದೆ. ಕಾರ್ಕಳದ ನಿಟ್ಟೆಯಲ್ಲಿ ಇದು ಸಾಕಾರಗೊಂಡಿದೆ ಅನ್ನುವುದು ವಿಶೇಷ. ಪಟ್ಟಣ ಪ್ರದೇಶದಲ್ಲಿ ಸ್ಥಳೀಯ ಆಡಳಿತಕ್ಕೆ ಸವಾಲಾಗಿದ್ದ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಇಚ್ಛಾಶಕ್ತಿಯ ಮೂಲಕ ಪರಿಹಾರ ಸಿಕ್ಕಿದೆ ಅನ್ನುವುದು ವಿಶೇಷ.
2.5 ಕೋಟಿ ವೆಚ್ಚದ ಘಟಕ
ಕಸದ ಸಮಸ್ಯೆ ನಿರ್ವಹಣೆಗೆ 2.5 ಕೋಟಿ ವೆಚ್ಚದಲ್ಲಿ ನಿಟ್ಟೆ ಎಂಆರ್ಎಫ್ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಲಾಗಿದೆ. ಈ ಮೂಲಕ ಕಾರ್ಕಳದ ಎಲ್ಲ 34 ಪಂಚಾಯತ್ಗಳ ಘನ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರವನ್ನು ಒದಗಿಸಲಾಗಿದೆ. ಇದರಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ಒದಗಿಸಲಾಗಿದೆ. ಘಟಕದ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಯ ವೀಕ್ಷಣೆ ಮತ್ತು ಅಧ್ಯಯನಕ್ಕೆ ಹೊರ ಭಾಗದ ಜನರು ಬರುವುದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಉತ್ತೇಜನವೂ ದೊರಕಿದೆ.