ನ್ಯೂಸ್ ನಾಟೌಟ್ : ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ರಾಜ್ಯ ಮಟ್ಟದ ಚಿಣ್ಣರ ಮೇಳ ನಡೆಯುತ್ತಿದ್ದು ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ.ಈ ಶಿಬಿರ ಮುಗಿಯುತ್ತಿದ್ದಂತೆ ಕೆಲವೇ ದಿನಗಳಲ್ಲಿ ಸುಳ್ಯಕ್ಕೆ ಖ್ಯಾತ ಚಲನಚಿತ್ರ ಗಾಯಕ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ರಮೇಶ್ಚಂದ್ರ ಅವರು ಬರುತ್ತಿದ್ದಾರೆ.
ಸಂಗಮ ಕಲಾಕ್ಷೇತ್ರ ಟ್ರಸ್ಟ್ (ರಿ) ಬೆಂಗಳೂರು ಹಾಗೂ ಗಣೇಶ್ ಮ್ಯೂಸಿಕಲ್ಸ್ ಸುಳ್ಯ ಆಶ್ರಯದಲ್ಲಿ ಒಂದು ದಿನದ ಸುಗಮ ಸಂಗೀತದ ಕಾರ್ಯಗಾರವನ್ನು ಮೇ.6ರಂದು ಏರ್ಪಡಿಸಲಾಗಿದ್ದು,ಹಾಡುಗಳ ಕಲರವವೇ ಇರಲಿದೆ.
ಕನ್ನಡದ ಪ್ರಸಿದ್ಧ ಸಾಹಿತಿಗಳ ಅನೇಕ ಹಾಡುಗಳನ್ನು ಕಲಿಸಲಾಗುತ್ತದೆ.ಇದೇ ಸಂದರ್ಭ ರಮೆಶ್ಚಂದ್ರ ಅವರು ಸಂಗೀತದ ರಾಗ,ತಾಳ, ಲಯ ,ಭಾವದ ಬಗ್ಗೆ ತಿಳಿಸಿಕೊಡಲಿದ್ದಾರೆ.ಆದರೆ ಈ ಕಾರ್ಯಗಾರದಲ್ಲಿ ಸೀಮಿತ ಮಂದಿಗೆ ಮಾತ್ರ ಅವಕಾಶವಿರಲಿದೆ ಎಂದು ತಿಳಿಸಲಾಗಿದೆ.ಪೂ.9.30 ರಿಂದ ಸಂಜೆ 5.00 ರವರೆಗೆ ಈ ಕಾರ್ಯಗಾರ ನಡೆಯಲಿದೆ.