ನ್ಯೂಸ್ ನಾಟೌಟ್: ಸಂಪಾಜೆ ಹಾಗೂ ಸುಬ್ರಹ್ಮಣ್ಯ ಭಾಗದಲ್ಲಿ ಮಳೆ ಸುರಿದಿದ್ದು,ಉರಿಬಿಸಿಲಿಗೆ ಕಂಗಾಲಾಗಿದ್ದ ಜನ ಮಳೆರಾಯನ ಆಗಮನದಿಂದ ಕೊಂಚ ನಿರಾಳರಾಗಿದ್ದಾರೆ.ಹಲವು ದಿನಗಳಿಂದ ಮಳೆಗಾಗಿ ಮೊರೆ ಹೋಗಿದ್ದ ಜನರ ಮುಖದಲ್ಲಿ ಮಂದಹಾಸ ಮೂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಸಮಯಗಳಿಂದ ಮಳೆಯ ಸೂಚನೆ ಇದ್ದರೂ ಮಳೆ ಸುರಿದಿರಲಿಲ್ಲ. ಬಿಸಿಲ ಬೇಗೆಗೆ ಜನ ತತ್ತರಿಸಿ ಹೋಗಿದ್ದರು. ಭೂಮಿ ಒಣಗಿ ಹೋಗಿದ್ದು ಹಲವು ಕಡೆಗಳಲ್ಲಿ ಬೆಂಕಿ ಅವಘಡಗಳಿಂದ ಜೀವ ಸಂಕುಲಗಳಿಗೆ ಹಾನಿಯಾಗಿತ್ತು. ಜನರಂತು ಯಾವಾಗ ಮಳೆ ಬರುತ್ತದೋ ಎಂದು ಕಾದು ಕುಳಿತಿದ್ದರು. ಅಲ್ಲದೇ ಹಲವೆಡೆ ನೀರಿನ ಅಭಾವವೂ ಉಂಟಾಗಿತ್ತು.ಇದೀಗ ಈ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು ಬಿಸಿಲಿನಿಂದ ತತ್ತರಿಸಿದ ಇಳೆಗೆ ವರುಣ ದೇವ ತಂಪೆರೆಸಿದ್ದಾನೆ.