ನ್ಯೂಸ್ ನಾಟೌಟ್: ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಶನಿವಾರ ಯುವ ಮತದಾರರೊಂದಿಗೆ ಸಂವಾದ ನಡೆಸಿದರು ರಾಷ್ಟ್ರೀಯ ವಿಚಾರಧಾರೆಯೊಂದಿಗೆ ಪಡೆಯುವ ಶಿಕ್ಷಣ ಯುವ ಜನಾಂಗವನ್ನು ಪ್ರಜ್ಞಾವಂತರನ್ನಾಗಿ ಮಾಡುತ್ತದೆ ಅಲ್ಲದೆ ದೇಶಕಟ್ಟುವ ಕಾಯಕದಲ್ಲಿ ಪ್ರತಿಯೊಬ್ಬರನ್ನೂ ಸಮರ್ಥವಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದರು.
ಶಿಕ್ಷಣವನ್ನು ಪಡೆಯುತ್ತಾ ಹೋದಂತೆ ಮನಸ್ಸು ದೇಶಪ್ರೇಮದಿಂದ ವಿಚಾಲಿತವಾಗದಂತೆ ನೋಡಿಕೊಳ್ಳುತ್ತದೆ, ಈ ನಿಟ್ಟಿನಲ್ಲಿ ಶಿಕ್ಷಣದ ಜೊತೆ ಜೊತೆಗೆ ರಾಷ್ಟ್ರೀಯ ವಿಚಾರೆಯನ್ನು ಬೋಧಿಸುವ ಶಿಕ್ಷಣ ಸಂಸ್ಥೆಗಳು ದೇಶಕ್ಕೆ ಮಾದರಿ ಎಂದು ಅಣ್ಣಾ ಮಲೈ ಅಭಿಪ್ರಾಯ ವ್ಯಕ್ತಪಡಿಸಿದರು.
ಸುಡಾನಿನಲ್ಲಿ ತೊಂದರೆ ಅನುಭವಿಸುತ್ತಿದ್ದ ಭಾರತೀಯರನ್ನು ನಮ್ಮ ಸೈನಿಕರು ದೇಶಕ್ಕೆ ವಾಪಾಸ್ ಕರೆ ತಂದಿದ್ದಾರೆ. ಈ ಹಿಂದೆ ಟರ್ಕಿಯಲ್ಲಿ ಸಿಲುಕಿಕೊಂಡಿದ್ದ ಜನರನ್ನು ಭಾರತೀಯ ಏರ್ಫೋರ್ಸ್ ರಕ್ಷಣೆ ಮಾಡಿ ಹಿಂದಕ್ಕೆ ಕರೆತಂದಿದೆ. ಇಂತಹ ಸಾಹಸ ಕಾರ್ಯಾಚರಣೆಯ ಹಿಂದೆ ದೇಶದ ಸಮರ್ಥ ನಾಯಕತ್ವ ಪ್ರೊತ್ಸಾಹ ಮತ್ತು ಬೆಂಬಲವಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು ಎಂದು ಅವರು ತಿಳಿಸಿದರು.
ಯುವ ಮತದಾರರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ಬಿಜೆಪಿ ತನ್ನ ಹುಟ್ಟಿನಿಂದ ಇದುವರೆಗೆ ಹಿಂದುತ್ವವನ್ನೇ ಪ್ರತಿಪಾದಿಸುತ್ತ ಬಂದಿರುವ ಪಕ್ಷ, ವ್ಯಕ್ತಿಯೊಬ್ಬ ಹಿಂದುತ್ವವನ್ನು ಪ್ರರಿಪಾದನೆ ಮಾಡುವಾಗ ಅದನ್ನು ಯಾರು ಪ್ರಶ್ನೆ ಮಾಡುವಂತೆ ಇಲ್ಲ. ಆದರೆ ಅದೇ ವ್ಯಕ್ತಿ ಪಕ್ಷದ ಒಳಗೆ ಇದ್ದರೆ, ಆಗ ದಂಡಿಸುವ ಅಧಿಕಾರ ಪಕ್ಷಕ್ಕಿದೆ. ಪಕ್ಷ ತನ್ನ ವ್ಯಾಪ್ತಿಯಲ್ಲಿ ಹಿಂದುತ್ವದ ಪ್ರತಿಪಾದನೆಗೆ ಯಾರನ್ನು ಯಾವ ಸಂದರ್ಭದಲ್ಲಿ ಬಳಸಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಂಡಿದೆ ಎಂದರು ಅಣ್ಣಾಮಲೈ ತಿಳಿಸಿದರು.
ಈ ವೇಳೆ ಡಾ. ಕಲ್ಲಡ್ಕ ಪ್ರಭಾಕರ ಭಟ್, ಪ್ರಕಾಶ್ ಮಲ್ಪೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.