ನ್ಯೂಸ್ ನಾಟೌಟ್ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದಲ್ಲಿ ಶುಕ್ರವಾರ ನಡೆದಿದೆ.
ವಿಜಯಲಕ್ಷ್ಮಿ (18) ಚಾಮರಾಜನಗರದ ಜೆಎಸ್ ಎಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೃತ ಪಟ್ಟಿದ್ದು, ಪಿಸಿಎಂಸಿ ವಿಷಯ ತೆಗೆದುಕೊಂಡಿದ್ದ ಈ ವಿದ್ಯಾರ್ಥಿನಿ ಅಂತಿಮ ಪರೀಕ್ಷಾ ಫಲಿತಾಂಶದಲ್ಲಿ ಫೇಲಾದ ವಿಷಯ ತಿಳಿದು, ನಗರದ ಜೆಎಸ್ ಎಸ್ ಹಾಸ್ಟೆಲ್ ನ ರೂಂ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿ ತಿಳಿಸಿದೆ.
ಈಕೆ ಗುಂಡ್ಲುಪೇಟೆ ತಾಲೂಕಿನ ಮೂಡುಗೂರು ಗ್ರಾಮದ ಮಹೇಶ್ ಎಂಬುವರ ಪುತ್ರಿಯಾಗಿದ್ದು, ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.