ನ್ಯೂಸ್ ನಾಟೌಟ್ : ಬಿಟುಮೆನ್ ಆಯಿಲ್ ಫಿಲ್ಲಿಂಗ್ ವೇಳೆ ಪೈಪ್ ಸ್ಪೋಟಗೊಂಡು ನಾಲ್ವರು ಕಾರ್ಮಿಕರು ಗಾಯಗೊಂಡ ಘಟನೆ ಮಂಗಳೂರಿನಿಂದ ವರದಿಯಾಗಿದೆ. ಮಂಗಳೂರಿನ ನವಬಂದರಿನಲ್ಲಿ ನಡೆದ ಈ ದುರಂತ ಹಡಗಿನಿಂದ ನೇರವಾಗಿ ಟ್ಯಾಂಕರ್ಗೆ ಬಿಟುಮೆನ್ ಆಯಿಲ್ ವರ್ಗಾಯಿಸುವಾಗ ಸಂಭವಿಸಿದೆ.ಆದರೆ ಶಿಪ್ನಲ್ಲಿ ಬಂದ ಬಿಟುಮೆನ್ ಆಯಿಲ್ ಅನ್ನು ಟ್ಯಾಂಕಿಗೆ ಮೊದಲು ವರ್ಗಾಯಿಸುವುದು ನಿಯಮ. ಆಯಿಲ್ ಅನ್ನು ಟ್ಯಾಂಕರ್ಗೆ ವರ್ಗಾಯಿಸುವ ವೇಳೆ ಪೈಪ್ ಸ್ಪೋಟಗೊಂಡು ಆಯಿಲ್ ಕಾರ್ಮಿಕರ ಮೈ ಮೇಲೆ ಬಿದ್ದಿದ್ದು ತಕ್ಷಣವೇ ಅವರನ್ನು ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
- +91 73497 60202
- [email protected]
- November 22, 2024 7:13 PM