ನ್ಯೂಸ್ ನಾಟೌಟ್ : ಇಂದಿನಿಂದ ಹೊಸ ಆರ್ಥಿಕ ವರ್ಷದ ಆರಂಭ.ಸರ್ಕಾರ ದೊಡ್ಡ ಉಡುಗೊರೆಯನ್ನು ಜನರಿಗೆ ನೀಡಿದೆ. ಇಷ್ಟು ದಿನ ಗ್ರಾಹಕರಿಗೆ ಆರ್ಥಿಕ ಹೊಡೆತ ನೀಡಿದ್ದ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಸರ್ಕಾರ ಕಡಿಮೆ ಮಾಡಿದ್ದು, ವಾಣಿಜ್ಯ ಸಿಲಿಂಡರ್ ಬೆಲೆ 91.50 ರೂಪಾಯಿ ಇಳಿಕೆಯಾಗಿದೆ.
ಇದರಿಂದ ಗ್ರಾಹಕರು ಕೊಂಚ ನಿರಾಳರಾಗಿದ್ದಾರೆ.ಇಂದಿನಿಂದಲೇ ಹೊಸ ದರಗಳನ್ನು ಜಾರಿಗೆ ತರಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಕಳೆದ ತಿಂಗಳು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 350 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಈಗ 91.50 ರೂಪಾಯಿ ಇಳಿಕೆಯಾಗಿರುವುದರಿಂದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
ಇಂಡಿಯನ್ ಆಯಿಲ್ ವೆಬ್ಸೈಟ್ ಪ್ರಕಾರ, ಇಂದಿನಿಂದ ಅಂದರೆ ಏಪ್ರಿಲ್ 1 ರಿಂದ ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 2028 ರೂ., ಕೋಲ್ಕತ್ತಾದಲ್ಲಿ 2132 ರೂ., ಮುಂಬೈನಲ್ಲಿ 1980 ರೂ. ಮತ್ತು ಚೆನ್ನೈನಲ್ಲಿ 2192.50 ರೂ.ಗೆ ಲಭ್ಯವಿದೆ. ಈ ಹಿಂದೆ ವಾಣಿಜ್ಯ ಸಿಲಿಂಡರ್ನ ಬೆಲೆ ದೆಹಲಿಯಲ್ಲಿ ರೂ 2119.50, ಕೋಲ್ಕತ್ತಾದಲ್ಲಿ ರೂ 2221.50 ಮತ್ತು ಮುಂಬೈನಲ್ಲಿ ರೂ 2071.50 ಆಗಿತ್ತು.
ಎಲ್ಪಿಜಿ ಬೆಲೆಯನ್ನು ಮುಖ್ಯವಾಗಿ ಸರ್ಕಾರಿ ತೈಲ ಕಂಪನಿಗಳು ನಿರ್ಧರಿಸುತ್ತವೆ ಮತ್ತು ಜಾಗತಿಕ ಕಚ್ಚಾ ಇಂಧನ ದರಗಳ ಆಧಾರದ ಮೇಲೆ ಮಾಸಿಕ ಆಧಾರದ ಮೇಲೆ ಬದಲಾವಣೆಗೆ ಒಳಪಟ್ಟಿರುತ್ತದೆ. ಕಚ್ಚಾ ತೈಲದ ಏರಿಕೆಯು ಎಲ್ಪಿಜಿ ದರಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಕಚ್ಚಾ ತೈಲದ ಇಳಿಕೆಯು ಬೆಲೆ ಇಳಿಕೆ ಸಿಲಿಂಡರ್ ದರ ಇಳಿಕೆಗೆ ಕಾರಣ. ಗೃಹಬಳಕೆಯ LPG ಗ್ಯಾಸ್ ಸಿಲಿಂಡರ್ (14.2 kgs) ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಕರ್ನಾಟಕದಲ್ಲಿ (ಬೆಂಗಳೂರು) ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ರೂ. 1,105.50 ಆಗಿದೆ.