ನ್ಯೂಸ್ ನಾಟೌಟ್ : ಮೃತಪಟ್ಟ ತಮ್ಮ ಹೆಣ್ಣುಮಕ್ಕಳ ದೇಹಗಳು ಅತ್ಯಾಚಾರಕ್ಕೆ ಒಳಗಾಗುವುದನ್ನು ತಡೆಯಲು ಪಾಕಿಸ್ತಾನದಲ್ಲಿ ಪೋಷಕರು ಸಮಾಧಿಗಳಿಗೆ ಬೀಗಮುದ್ರೆ ಹಾಕುತ್ತಿರುವ ಆಘಾತಕಾರಿ ಸಂಗತಿ ಶನಿವಾರ ಬೆಳಕಿಗೆ ಬಂದಿದೆ.
ದೇಶದಲ್ಲಿ ಶವ ಸಂಭೋಗದ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ವರದಿಗಳು ಆಘಾತಕಾರಿ ಮಾಹಿತಿ ನೀಡಿವೆ.
ಪಾಕಿಸ್ತಾನದಲ್ಲಿ ಪ್ರತಿ ಎರಡು ಗಂಟೆಗೆ ಒಂದರಂತೆ ಮಹಿಳೆಯರ ಅತ್ಯಾಚಾರ ನಡೆಯುತ್ತಿದೆ. ಆದರೆ ಮಹಿಳೆಯರ ಸಮಾಧಿಗಳಿಗೆ ಬೀಗ ಮುದ್ರೆ ಹಾಕುವಂತಹ ಹೃದಯ ಹಿಂಡುವ ದೃಶ್ಯಗಳು ಇಡೀ ಸಮಾಜವನ್ನು ಅವಮಾನದಿಂದ ತಲೆ ತಗ್ಗಿಸುವಂತೆ ಮಾಡುತ್ತಿದೆ ಎಂದು ಪಾಕಿಸ್ತಾನದ ಡೈಲಿ ಟೈಮ್ಸ್ ಸಂಪಾದಕೀಯದಲ್ಲಿ ಖೇದ ವ್ಯಕ್ತಪಡಿಸಿದೆ.
ಮುಸ್ಲಿಂ ನಾಸ್ತಿಕವಾದಿ ಹೋರಾಟಗಾರ ಹಾಗೂ ‘ದಿ ಕರ್ಸ್ ಆಫ್ ಗಾಡ್, ವೈ ಐ ಲೆಫ್ಟ್ ಇಸ್ಲಾಂ’ ಪುಸ್ತಕದ ಲೇಖಕ ಹ್ಯಾರಿಸ್ ಸುಲ್ತಾನ್ ಅವರು, ಇಂತಹ ಹೇಯ ಕ್ರೌರ್ಯದ ಕೃತ್ಯಗಳಿಗೆ ಖಟ್ಟರ್ ಇಸ್ಲಾಂ ಸಿದ್ಧಾಂತವಾದಿಗಳೇ ಕಾರಣ ಎಂದು ದೂಷಿಸಿದ್ದಾರೆ.