ನ್ಯೂಸ್ ನಾಟೌಟ್: ಈಗಾಗಲೇ ಐಪಿಎಲ್ ಪ್ರರಾಂಭಗೊಂಡಿದೆ. ಇತ್ತೀಚೆಗೆ ಆನ್ಲೈನ್ ಬೆಟ್ಟಿಂಗ್ ಆಟಗಳು ವಿಪರೀತವಾಗಿ ಜನರ ತಲೆ ಕೆಡಿಸಿವೆ. ಅನೇಕ ನಟರು ಈ ಆ್ಯಪ್ ಗಳಿಗೆ ಜಾಹೀರಾತುಗಳನ್ನು ನೀಡಿ ಟೀಕೆಗೆ ಒಳಗಾಗಿದ್ದಾರೆ. ಇದರ ಜೊತೆಗೆ ಲಕ್ಷದಲ್ಲಿ ಒಬ್ಬ ಅದೃಷ್ಟಶಾಲಿಗೆ ಭರ್ಜರಿ ಹಣ ದೊರೆಯುವುದಿದೆ. ಆದರೆ ಉಳಿದ ಕೋಟ್ಯಾಂತರ ಜನ ಈ ಗೀಳಿನಿಂದ ಹಣ ಕಳೆದುಕೊಳ್ಳುತ್ತಿರುವುದು ಸುಳ್ಳಲ್ಲ.
ಆದರೆ, ಇಲ್ಲೊಬ್ಬ ವ್ಯಕ್ತಿ ಆನ್ಲೈನ್ ಗೇಮಿಂಗ್ ಆ್ಯಪ್ ನಲ್ಲಿ ರಾತ್ರೋರಾತ್ರಿಯಲ್ಲಿ 1.50 ಕೋಟಿ ರೂ.ವನ್ನು ಗೆದ್ದಿದ್ದಾನೆ. ಚಾಲಕನಾಗಿ ಕೆಲಸ ಮಾಡುತ್ತದ್ದ ವ್ಯಕ್ತಿಯ ಅದೃಷ್ಟ ಒಲಿದು ಬಂದಿದೆ.
ಈ ವೇಳೆ ಆನ್ಲೈನ್ ಗೇಮಿಂಗ್ ಆ್ಯಪ್ ನಲ್ಲಿ ತಮ್ಮದೇ ಐಪಿಎಲ್ ತಂಡ ರಚಿಸಿ ಬಿಡ್ಡಿಂಗ್ ಆಟವಾಡಿದ್ದಾರೆ. ಶಹಾಬುದ್ದೀನ್ ಮನ್ಸೂರಿ ಎಂಬವರು ಚಾಲಕನಾಗಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಬಡ ಕುಟುಂಬದಲ್ಲಿ ಜನಿಸಿದ ಈತ ಕಳೆದ ಎರಡು ವರ್ಷಗಳಿಂದ ಆನ್ಲೈನ್ ಗೇಮಿಂಗ್ ಆಪ್ ನಲ್ಲಿ ಟೀಮ್ ಮಾಡಿ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡುತ್ತಿದ್ದರು ಎಂದು ವರದಿ ತಿಳಿಸಿದೆ.
ಭಾನುವಾರ ಐಪಿಎಲ್ ನಲ್ಲಿ ನಡೆದ ಕೆಕೆಆರ್ ಹಾಗೂ ಪಂಜಾಬ್ ನಡುವಿನ ಪಂದ್ಯಕ್ಕೆ ತಮ್ಮ ನೆಚ್ಚಿನ ತಂಡಕ್ಕೆ 49 ರೂ.ಯನ್ನು ಕಟ್ಟಿದ್ದಾರೆ. ಕೋಟಿ ಗೆಲ್ಲುವ ವಿಭಾಗದಲ್ಲಿ ತಂಡವನ್ನು ಕಟ್ಟಿದ ಶಹಾಬುದ್ದೀನ್ ಮನ್ಸೂರಿ ಪಂದ್ಯ ಮುಗಿದ ಬಳಿಕ 1.50 ಕೋಟಿ ರೂ.ವನ್ನು ಗೆಲ್ಲುವ ಮೂಲಕ ಅವರ ಜೀವನವೇ ಬದಲಾಗಿದೆ.
ಸದ್ಯ ಶಹಾಬುದ್ದೀನ್ ತನ್ನ ಆ್ಯಪ್ ವ್ಯಾಲೆಟ್ ನಿಂದ ರೂ 20 ಲಕ್ಷವನ್ನು ವಿತ್ ಡ್ರಾ ಮಾಡಿಕೊಂಡಿದ್ದಾರೆ. ವಿಜೇತ ಮೊತ್ತದ 1.5 ಕೋಟಿ ರೂ.ನಲ್ಲಿ ಒಟ್ಟು ರೂ.6 ಲಕ್ಷ ತೆರಿಗೆಯಾಗಿ ಕಡಿತವಾಗಿದೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅವರು ಇನ್ನು ಬಂದ ಹಣದಿಂದ ಸ್ವಂತ ಮನೆ ಕಟ್ಟಿ, ತಾವೇ ಒಂದು ವ್ಯಾಪಾರ ಮಾಡುವ ಕನಸು ಹೊತ್ತಿದ್ದಾರೆ ಎನ್ನಲಾಗಿದೆ.