ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆ ಪಟ್ಟಣದಲ್ಲಿ ವಯಸ್ಸಾದ ರೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕರ್ನಾಟಕ ಪೊಲೀಸರು ಯುವಕ ಹೋಮ್ ನರ್ಸ್ ನನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಬಂಧಿತ ಪುರುಷ ನರ್ಸ್ ಗದಗ ಮೂಲದ 19 ವರ್ಷದ ಶಿವಾನಂದ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿಯನ್ನು ಕೊಡಂಗಲ್ಲು ಬಳಿಯ ಹುಡ್ಕೋ ಎಂಬ ಹೆಸರಿನ ಕಾಲೋನಿಯ ನಿವಾಸವೊಂದರಲ್ಲಿ ಅನಾರೋಗ್ಯದ ವೃದ್ದೆ ರೋಗಿಯನ್ನು ನೋಡಿಕೊಳ್ಳಲು ಈತನನ್ನು ನೇಮಿಸಲಾಗಿತ್ತು.
ವೃದ್ಧೆ ಪದೆ ಪದೆ ಅನಾರೋಗ್ಯಕ್ಕೆ ಒಳಗಾಗಿದ್ದರು ಮತ್ತು ಖಿನ್ನತೆಗೆ ಒಳಗಾಗಿದ್ದರು. ಆರೋಪಿ ಗೊತ್ತಾಗದಂತೆ ಲೈಂಗಿಕ ಕಿರುಕುಳ ನೀಡಿದ್ದ, ಕುಟುಂಬಸ್ಥರು ಅನುಮಾನಗೊಂಡು ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದಾರೆ.
ಆರೋಪಿ ವೃದ್ಧ ರೋಗಿಯನ್ನು ಅಸ್ವಾಭಾವಿಕ ಲೈಂಗಿಕತೆಗೆ ಬಲವಂತ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಆರೋಪಿಯು ತನ್ನ ಬೇಡಿಕೆಗಳನ್ನು ಒಪ್ಪಿಕೊಳ್ಳದಾಗ ರೋಗಿಯನ್ನು ಥಳಿಸಿದ ದೃಶ್ಯವನ್ನು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ಮೂಡುಬಿದರೆ ಪೊಲೀಸರಿಗೆ ಕುಟುಂಬದವರು ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.