ನ್ಯೂಸ್ ನಾಟೌಟ್ : ಚುನಾವಣೆ ಸಮೀಪಿದಲ್ಲಿದೆ ಅನ್ನುವಾಗ ಮದ್ಯದಂಗಡಿಗಳ ಮೇಲೆ ಚುನಾವಣಾಧಿಕಾರಿ ಹದ್ದಿನ ಕಣ್ಣಿಟ್ಟಿದ್ದಾರೆ. ನೀತಿ ನಿಯಮಗಳನ್ನು ಗಾಳಿಗೆ ತೂರಿ ಎಗ್ಗಿಲ್ಲದೆ ಮದ್ಯ ಮಾರಾಟ ಮಾಡುತ್ತಿರುವ ಸುಳ್ಯ ತಾಲೂಕಿನ ಕೆಲವು ವೈನ್ ಶಾಪ್ಗಳ ಬಗೆಗಿನ ವರದಿ ನ್ಯೂಸ್ ನಾಟೌಟ್ ನಲ್ಲಿ ಪ್ರಕಟಗೊಂಡಿತ್ತು. ಈ ಬೆನ್ನಲ್ಲೇ ಸುಳ್ಯ ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿ ಬಿಗಿ ಕ್ರಮಕ್ಕೆ ಮುಂದಾಗಿದ್ದಾರೆ.
ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ನಿಯಮ ಮೀರಿ ಲೂಸ್ ಮದ್ಯವನ್ನು ಮಾರಾಟ ಮಾಡುತ್ತಿರುವ ವೈನ್ ಶಾಪ್ಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಯಾವುದಾದರೂ ಮದ್ಯದಂಗಡಿಗಳು ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರೆ ಅಂತಹ ವೈನ್ ಶಾಪ್ಗಳ ಲೈಸನ್ಸ್ ರದ್ದಾಗುವ ಸಾಧ್ಯತೆಯೂ ಇದೆ ಎಂದು ಮೂಲಗಳು ನ್ಯೂಸ್ ನಾಟೌಟ್ ಗೆ ತಿಳಿಸಿವೆ.
ಏಪ್ರಿಲ್ ೬ರಂದು ನ್ಯೂಸ್ ನಾಟೌಟ್ ‘ಸುಳ್ಯ: ಬಸ್ ಸ್ಟ್ಯಾಂಡ್ನಲ್ಲಿ ಕುಡಿದವನ ಮೇಲೆ ಕೇಸು, ನಿಯಮ ಉಲ್ಲಂಘಿಸಿದ ವೈನ್ ಶಾಪ್ ಯಾಕಿಲ್ಲ ಕೇಸು’ ಅನ್ನುವ ತಲೆಬರಹದಡಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.