ನ್ಯೂಸ್ನಾಟೌಟ್: ತನ್ನ ಮದುವೆ ಪ್ರಸ್ತಾಪ ತಿರಸ್ಕರಿಸಿ ಬೇರೊಬ್ಬನ ಜೊತೆ ಇನ್ಸಾಗ್ರಾಮ್ ನಲ್ಲಿ ರೀಲ್ಸ್ ಮಾಡಿದಕ್ಕೆ ಕೋಪಗೊಂಡಿದ್ದ ಪಾಗಲ್ ಪ್ರೇಮಿಯೋಬ್ಬನು ತನ್ನ ಪ್ರಿಯತಮೆಯನ್ನು ಕೊಲೆಗೈದು ಸುಟ್ಟು ಹಾಕಿರುವ ಘಟನೆ ಯಾದಗಿರಿ ತಾಲೂಕಿನ ಅರಕೇರಾದಲ್ಲಿ ನಡೆದಿದೆ.
ಕೊಲೆಗೈದಿರುವ ಗುರುಮಠಕಲ್ ಪೊಲೀಸರು ಬಂಧಿಸಿದ್ದಾರೆ. ಕೊಲೆಗೈದಿರುವ ವ್ಯಕ್ತಿಯನ್ನು ಮಾರುತಿ ರಾಥೋಡ್ ಎನ್ನಲಾಗಿದ್ದು, ಇತನು ಮೂಲತಃ ಯಾದಗಿರಿ ತಾಲೂಕಿನ ಅರಕೇರಾದ ಪಂಚಶೀಲ ನಗರದ ನಿವಾಸಿ ಎನ್ನಲಾಗಿದ್ದು, ಮುಂಬೈನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.ಈಗ ಕೊಲೆಯಾಗಿರುವ ಮಹಿಳೆ ಉತ್ತರ ಪ್ರದೇಶ ಮೂಲದ ಅಂತಿಮ ವರ್ಮಾ ( 25) ಎನ್ನಲಾಗಿದ್ದು ಆಕೆ ಮುಂಬೈನಲ್ಲಿರುವ ತನ್ನ ಸಹೋದರನ ಮನೆಯಲ್ಲಿ ವಾಸಿಸುತ್ತಿದ್ದಳು ಎನ್ನಲಾಗಿದೆ.
ಮಾರುತಿ ಕೂಡ ಆಕೆಯ ಮನೆ ಪಕ್ಕದಲ್ಲಿಯೇ ವಾಸಿಸುತ್ತಿದ್ದನು, ಹೀಗಾಗಿ ಇಬ್ಬರಿಗೂ ಪರಿಚಯವಾಗಿ ನಂತರ ಅದು ಪ್ರೇಮಾಂಕುರಕ್ಕೆ ತಿರುಗಿತ್ತು, ಆದರೆ ಆಕೆ ಆತನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿ ಬೇರೆಯವರ ಜೊತೆ ರೀಲ್ಸ್ ಮಾಡುತ್ತಿದ್ದಳು, ಇದರಿಂದ ಕುಪಿತನಾಗಿದ್ದ ಪ್ರೇಮಿ ಆಕೆ ತನ್ನ ಊರಿಗೆ ಬಂದಾಗ ಹೊಲದಲ್ಲಿ ಆಕೆಯನ್ನು ಹತ್ಯೆಗೈದು ಪೆಟ್ರೋಲ್ ಹಾಕಿ ಸುತ್ತಿದ್ದಾನೆ ಎಂದು ವರದಿ ತಿಳಿಸಿದೆ. ಈಗ ಎಪ್ರಿಲ್ 3 ರಂದು ನಡೆದ ಕೊಲೆ ಪ್ರಕರಣವನ್ನು ಬೇಧಿಸಿದ ಪೊಲೀಸರು ಈಗ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.