ನ್ಯೂಸ್ ನಾಟೌಟ್ : ಇಂಡೋನೇಷ್ಯಾ ಹ್ಯಾಕರ್ಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ 12,000 ವೆಬ್ಸೈಟ್ಗಳ ಮೇಲೆ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಗುಪ್ತಚರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಹೈದರಾಬಾದ್ ಸರ್ಕಾರ ಹೈ ಅಲರ್ಟ್ ಘೋಷಿಸಲಾಗಿದೆ.
ಸಿಇಆರ್ಟಿ-ಇನ್ ಎಲ್ಲಾ ಕೇಂದ್ರ ಮತ್ತು ರಾಜ್ಯ ಏಜೆನ್ಸಿಗಳು ಮತ್ತು ಇಲಾಖೆಗಳು ಜಾಗರೂಕರಾಗಿರಬೇಕು ಮತ್ತು ಅಂತಹ ಘಟನೆಗಳನ್ನು ತಕ್ಷಣವೇ ಸಂಬಂಧಪಟ್ಟ ಇಲಾಖೆ ಮೂಲಕ ವರದಿ ಮಾಡುವಂತೆ ‘ತುರ್ತು-ಹೈ ಅಲರ್ಟ್’ ನೀಡಿ ಎಚ್ಚರಿಸಿದೆ.
ವಿಶೇಷವಾಗಿ ರಕ್ಷಣೆ, ನಿರ್ಣಾಯಕ ಸ್ಥಾಪನೆಗಳು, ಪ್ರಮುಖ ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯ ಗುಪ್ತಚರ ವಿಭಾಗಗಳು ಸೇರಿದಂತೆ ಎಲ್ಲಾ ಕಾನೂನು ಜಾರಿ ಸಂಸ್ಥೆಗಳು ದಾಳಿಯನ್ನು ತಡೆಯಲು ಸಜ್ಜಾಗಿವೆ ಎಂದು ವರದಿ ತಿಳಿಸಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ವೆಬ್ಸೈಟ್ಗಳನ್ನು ಗುರಿಪಡಿಸಲಾಗುತ್ತಿದ್ದು, “ಹ್ಯಾಕ್ಟಿವಿಸ್ಟ್ ಇಂಡೋನೇಷ್ಯಾ ಗುಂಪು”(hacktivist Indonesia group) ಭಾರತದ 12,000 ವೆಬ್ಸೈಟ್ಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಹೇಳಲಾಗುತ್ತಿದೆ.
ದಾಳಿಕೋರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವೆಬ್ಸೈಟ್ಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದ್ದು, ಜಾಗರೂಕರಾಗಿರಲು ಸಂಬಂಧಿತ ವಿಭಾಗಗಳು ಮತ್ತು ಇಲಾಖೆಗಳಿಗೆ ತಿಳಿಸಲಾಗಿದೆ.