ನ್ಯೂಸ್ ನಾಟೌಟ್: ಮುಂಬೈನಲ್ಲಿ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಭಾರತ ಮತ್ತು ವಿದೇಶಗಳ ಕಲಾವಿದರು, ಧಾರ್ಮಿಕ ಮುಖಂಡರು, ಕ್ರೀಡಾಳುಗಳು ಮತ್ತು ಉದ್ಯಮಿಗಳ ಜೊತೆಗೆ ದೇಶದ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಮತ್ತು ಕುಟುಂಬ ಸದಸ್ಯರು ಕಾರ್ಯಕ್ರಮ ನಡೆಸಿಕೊಟ್ಟರು ಎನ್ನುವುದು ಎಲ್ಲೆಡೆ ಸುದ್ದಿಯಾಗುತ್ತಿರುವ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ವಿಷಯ ಬೆಳಕಿಗೆ ಬಂದಿದೆ.
ಅದ್ಧೂರಿ ಸಮಾರಂಭದಲ್ಲಿ ಹತ್ತಾರು ಸೆಲೆಬ್ರಿಟಿಗಳು ನೃತ್ಯ, ಮನರಂಜನೆಯನ್ನು ನೀಡಿದ್ದಾರೆ. ಬಂದಿರುವ ಅತಿಥಿಗಳಿಗೆ ಭಾರತೀಯ ಪದ್ಧತಿಯ ಆಹಾರವನ್ನು ನೀಡಿದ್ದಾರೆ ಮುಖೇಶ್ ಅಂಬಾನಿ ದಂಪತಿ. ರೊಟ್ಟಿ, ದಾಲ್, ಪಾಲಾಕ್ ಪನೀರ್, ಕರಿ, ಹಲ್ವಾ, ಸಿಹಿತಿಂಡಿ, ಪಾಪಡ್ ಮತ್ತು ಲಡ್ಡೂ ಮುಂತಾದ ಭಾರತೀಯ ಭಕ್ಷ್ಯಗಳನ್ನು ನೀಡಿ ಸತ್ಕರಿಸಿದ್ದಾರೆ. ಈ ಭಕ್ಷ್ಯಗಳಲ್ಲಿ ಸಿಹಿ ತಿಂಡಿಯೊಂದರ ಜೊತೆ 500 ರೂ ನೋಟುಗಳನ್ನು ಇಟ್ಟಿರುವ ಫೋಟೋವೊಂದು ವೈರಲ್ ಆಗಿದೆ.
ಹಲ್ವಾ ರೀತಿಯಲ್ಲಿರುವ ʼದೌಲತ್ ಕಿ ಚಾತ್ʼ ಸಿಹಿಯನ್ನು ನೋಟುಗಳ ಜೊತೆಯೇ ನೀಡುವುದು ಕ್ರಮ. ಈ ನೋಟುಗಳು ನಿಜವಾದ ನೋಟುಗಳಲ್ಲ. ನಕಲಿ ನೋಟುಗಳು. ʼದೌಲತ್ ಕಿ ಚಾತ್ʼ ಸಿಹಿ ಪಕ್ಕದಲ್ಲಿ ನೋಟುಗಳನ್ನು ಇಡುವುದು ರೂಢಿ ಹಾಗಾಗಿ ನಕಲಿ ನೋಟುಗಳನ್ನು ಇಟ್ಟು ತಿಂಡಿ ನೀಡಿದ್ದಾರೆ ಎನ್ನಲಾಗಿದೆ.