ನ್ಯೂಸ್ ನಾಟೌಟ್ : ಮನುಷ್ಯನಿಗಿಂತಲೂ ಪ್ರಾಣಿಗಳು ಎಷ್ಟೋ ಮೇಲು ಅನ್ನುವ ಮಾತನ್ನು ಪ್ರಾಣಿಗಳು ಆಗಾಗ ಪ್ರೂವ್ ಮಾಡುತ್ತಲೇ ಇರುತ್ತವೆ.ನಿಯತ್ತಿನ ಪ್ರಾಣಿ ಎಂದು ನಾಯಿಯನ್ನು ಹೇಳುತ್ತಾರೆ.ಆದರೆ ಇಲ್ಲೊಂದು ಕೋತಿ ತನಗೆ ಅನ್ನ ಹಾಕಿದ ಅಜ್ಜ ಪ್ರಾಣ ಬಿಟ್ಟಾಗ ಕಣ್ಣೀರಿಟ್ಟು ಮುತ್ತಿಕ್ಕಿ ವಿದಾಯ ಹೇಳಿದ ವಿಡಿಯೋವೊಂದು ಬಾರಿ ವೈರಲ್ ಆಗಿದೆ.ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಈ ಘಟನೆ ನಡೆದಿದ್ದು, ವಿಜಯನಗರ ಜಿಲ್ಲೆಯಲ್ಲಿ. ಹೊಟೆಲ್ ಉದ್ಯಮಿಯ ಶವಕ್ಕೆ ಮಂಗ ಮುತ್ತು ಕೊಟ್ಟು ನಮನ ಸಲ್ಲಿಸಿ ತನಗೆ ಅನ್ನ ಕೊಟ್ಟವರ ಋಣ ತೀರಿಸಿದೆ. ಹಗರಿಬೊಮ್ಮನಹಳ್ಳಿ ಪಟ್ಟಣದ ಹೊಟೇಲ್ ಉದ್ಯಮಿ ಪರಶುರಾಮ ಪೋಮುಸಾ ಹಬೀಬ್ ಸಾವಜಿ ಎಂಬ ವೃದ್ಧ ವ್ಯಕ್ತಿ ಏಪ್ರಿಲ್ 3 ರಂದು ಇಹಲೋಕ ತ್ಯಜಿಸಿದ್ದರು. ಸಾವಜಿ ಸಣ್ಣಂದಿನಿಂದಲೂ ಪ್ರಾಣಿ – ಪಕ್ಷಿ ಪ್ರಿಯರಾಗಿದ್ದರು. ತಮ್ಮ ಜೀವನದುದ್ದಕ್ಕೂ ಪ್ರಾಣಿ ಪಕ್ಷಿಗಳಿಗೆ ಕೈಲಾದ ನೆರವು ನೀಡುತ್ತಿದ್ದರು. ಅದರಲ್ಲೂ ಈ ಕೋತಿಗೆ ನಿತ್ಯವೂ ಹೊಟೇಲಿನಿಂದ ಹಣ್ಣು, ರೊಟ್ಟಿ ನೀಡಿ ಆರೈಕೆ ಮಾಡುತ್ತಿದ್ದರು.
ಅಜ್ಜನ ಸೂಚನೆಯಂತೆ ಮನೆಯವರು ಕೋತಿಗೆ ನಿತ್ಯವೂ ಆಹಾರ ನೀಡುತ್ತಿದ್ದರು. ಅದನ್ನು ತಿಂದ ಕೋತಿ ಸಂತೃಪ್ತಿಯಿಂದ ಮರಳುತ್ತಿತ್ತು. ಆದರೆ ಅಜ್ಜ ಇಹಲೋಕ ತ್ಯಜಿಸಿದ್ದನ್ನು ತಿಳಿದ ಮಂಗ ತನ್ನ ಆಪತ್ಬಾಂಧವ ಆಗಲಿದ್ದಾನೆಂದು ಸಂಕಟ ಪಟ್ಟುಕೊಂಡಿದೆ. ಅಲ್ಲದೆ, ನಿತ್ಯ ತನಗೆ ಆಹಾರ ಹಾಕುತ್ತಿದ್ದ ಅಜ್ಜನ ಹಣೆಗೆ ಮುತ್ತು ಕೊಟ್ಟು ವಿದಾಯ ಹೇಳಿದ್ದು ಮಂಗನಿಗೂ ದುಃಖ, ಸಂತಸದ ಭಾವನೆ ಇದೆಯೆಂಬುದನ್ನು ಸಾರಿದೆ.