ನ್ಯೂಸ್ ನಾಟೌಟ್ : ರಾಜ್ಯ ವಿಧಾನಸಭೆ ಚುನಾವಣಾ ಹೊಸ್ತಿಲಲ್ಲಿ ಹಲವು ರಾಜಕೀಯ ಘಟನೆಗಳು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತವೆ, ಈ ನಡುವೆ ಬಿಜೆಪಿ ಭಾನುವಾರ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಅವರು ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋವನ್ನು ಹಂಚಿಕೊಂಡು ರಾಜಕೀಯವಾಗಿ ಟೀಕಿಸಿದೆ.
ಈ ಬಗ್ಗೆ ವಿಡಿಯೋ ವೊಂದನ್ನು ಬಿಜೆಪಿ ಟ್ವಿಟರ್ ನಲ್ಲಿ ಶೇರ್ ಮಾಡಿದ್ದು, “ಗೂಂಡಾ ವರ್ತನೆ ಕಾಂಗ್ರೆಸ್ನ ಡಿಎನ್ಎಯಲ್ಲಿದೆ. ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ತಮ್ಮ ಕುಂದುಕೊರತೆಗಳನ್ನು ಹಂಚಿಕೊಂಡಿಳ್ಳಲು ಬಂದ ಯುವಕನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಅಸಮಾಧಾನದಿಂದ ಹೊಡೆತ ನೀಡುವುದು ಮಾತ್ರ ಕಾಂಗ್ರೆಸ್ ನೀಡುವ ಒಂದೇ ಒಂದು ಗ್ಯಾರಂಟಿ” ಎಂದು ವ್ಯಂಗ್ಯವಾಗಿ ಟೀಕಿಸಿದೆ.
ಮೂಲಗಳ ಪ್ರಕಾರ, ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಎಂಬಿ ಪಾಟೀಲ್ ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ತನ್ನ ಗ್ರಾಮಕ್ಕೆ ಏನು ಅಭಿವೃದ್ಧಿ ಕೆಲಸ ಮಾಡಿದ್ದೀರಿ ಎಂದು ಯುವಕ ಪಾಟೀಲ್ ಅವರನ್ನು ಕೇಳಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕಾರಣದಿಂದಾಗಿ ವಾಗ್ವಾದವು ಹೆಚ್ಚಾಗಿ ಪಾಟೀಲ್ ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡಲು ಕಾರಣವಾಯಿತು ಎಂದು ವರದಿ ತಿಳಿಸಿದೆ.