ನ್ಯೂಸ್ ನಾಟೌಟ್ : ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ ಅವರ ತಾಯಿ ಫಾತಿಮಾ ಇಸ್ಮಾಯಿಲ್ ಅವರು ವಿಧಿವಶರಾಗಿದ್ದಾರೆ.ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಅಲ್ಲಿ ಕೊನೆಯುಸಿರೆಳೆದರು.ಇಂದು ಸಂಜೆ 4 ಗಂಟೆಗೆ ಚೆಂಪು ಜುಮಾ ಮಸೀದಿಯಲ್ಲಿ ಅಂತ್ಯಸಂಸ್ಕಾರ ನೇರವೇರಲಿದೆ ಎಂದು ತಿಳಿದು ಬಂದಿದೆ. ಈದ್ನ ಮುನ್ನ, ಮಮ್ಮುಟ್ಟಿ ಅವರ ತಾಯಿ ಮತ್ತು ದುಲ್ಕರ್ ಸಲ್ಮಾನ್ ಅವರ ಅಜ್ಜಿಯ ನಿಧನವು ಅವರ ಕುಟುಂಬವನ್ನು ದುಃಖಕ್ಕೀಡು ಮಾಡಿದೆ. ನಿಧನದ ನಂತರ, ಮಲಯಾಳಂ ಸಿನಿ ಲೋಕದ ಅನೇಕ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಫಾತಿಮಾ ಇಸ್ಮಾಯಿಲ್ ಅವರು ತನ್ನ ಐವರು ಮಕ್ಕಳನ್ನು ಅಗಲಿದ್ದಾರೆ.