ನ್ಯೂಸ್ ನಾಟೌಟ್: ಹುಟ್ಟು ಹಬ್ಬದ ನೆಪದಲ್ಲಿ ಗೆಳತಿಯನ್ನು ಮನೆಗೆ ಕರೆದು ಯುವಕ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.
ನವ್ಯಾ (25) ಎಂಬ ಯುವತಿಯನ್ನು ಪ್ರಶಾಂತ್ (28) ತನ್ನ ಕೊಠಡಿಗೆ ಕರೆದು ಅಲ್ಲಿ ಚಾಕುವಿನಿಂದ ಯುವತಿಯ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ, ಮಾತ್ರವಲ್ಲ ಕೊಲೆ ಬಳಿಕ ಚಾಕು ಸಹಿತ ರಾಜಗೋಪಾಲ ನಗರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಪೊಲೀಸ್ ಇಲಾಖೆಯಲ್ಲಿ ಆಂತರಿಕ ಭದ್ರತಾ ವಿಭಾಗದಲ್ಲಿ (ಐಎಸ್ಡಿ) ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಆಕೆಯ ಸಂಬಂಧಿಯೇ ಆಗಿದ್ದ ಪ್ರಶಾಂತ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ನವ್ಯ-ಪ್ರಶಾಂತ್ ಸಂಬಂಧದಲ್ಲಿ ಅಣ್ಣ-ತಂಗಿ ಆಗಿದ್ದರು. ಈ ವಿಚಾರ ಅವರಿಗೆ ತಿಳಿದಿರಲಿಲ್ಲ. ಮನೆಯವರೆಲ್ಲರು ಇವರಿಬ್ಬರಿಗೆ ಅಣ್ಣ-ತಂಗಿ ಎಂದು ಬುದ್ಧಿವಾದ ಹೇಳಿದ್ದರು. ಆದರೆ ಇತ್ತೀಚಿಗೆ ನವ್ಯ ಸಹೋದ್ಯೋಗಿಯೊಬ್ಬರ ಜತೆಗೆ ಸಲುಗೆ ಬೆಳೆಸಿಕೊಂಡಿದ್ದರು. ನಿತ್ಯವೂ ಚಾಟಿಂಗ್ ಮಾಡುತ್ತಿದ್ದರು. ಪ್ರಶಾಂತ್ ಜತೆ ಇದ್ದಾಗಲೂ ಚಾಟಿಂಗ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ.