ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲೊಂದಾದ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದಿನ ನಿತ್ಯ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.ನಂಬಿದವರಿಗೆ ಇಂಬು ನೀಡುವ ಸುಬ್ರಹ್ಮಣ್ಯ ಸ್ವಾಮಿ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಿ ಭಕ್ತರ ಇಷ್ಟಾರ್ಥವನ್ನು ನೆರವೇರಿಸುವ ದೇವರು.ನಾಗಾರಾಧನೆಗೆ ಪ್ರಸಿದ್ದಿ ಪಡೆದ ಈ ಪವಿತ್ರ ದೇಗುಲ ಈ ಬಾರಿಯೂ 123 ಕೋಟಿ ರೂ. ಆದಾಯ ಗಳಿಸುವ ಮೂಲಕ ರಾಜ್ಯದಲ್ಲಿ ನಂ.1 ಸ್ಥಾನ ಪಡೆದುಕೊಂಡಿದೆ.
2022ರ ಏಪ್ರಿಲ್ನಿಂದ 2023ರ ಮಾ.31ರವರೆಗಿನ ಆರ್ಥಿಕ ವರ್ಷದಲ್ಲಿ 123,64,49,480 ರೂ. ಆದಾಯ ಗಳಿಸಿ ರಾಜ್ಯದಲ್ಲೆ ನಂ.೧ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ.ದೇವಾಲಯದಲ್ಲಿ ದೂರದೂರಿನಿಂದ ಬರುವ ಭಕ್ತರಿಗಾಗಿ ವಿಶೇಷ ವ್ಯವಸ್ಥೆಗಳು ಇಲ್ಲಿವೆ.ದೇವಾಲಯಕ್ಕೆ ಹರಕೆ ಸೇವೆ, ಕಾಣಿಕೆ ಮಾತ್ರವಲ್ಲದೇ ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಕೃಷಿ ತೋಟದಿಂದಲೂ ಆದಾಯ ಬರುತ್ತಿದ್ದು, ಕುಕ್ಕೆಯು 2007ರಿಂದೀಚೆಗೆ ಹೆಚ್ಚಿನ ಆದಾಯ ಪಡೆಯುವ ಮೂಲಕ ರಾಜ್ಯದ ಶ್ರೀಮಂತ ದೇವಳವಾಗಿ ಗುರುತಿಸಿಕೊಂಡಿದೆ.